ಮೂಡಿಗೆರೆ : ಕೆಸವಳಲು ಮಹಾರುದ್ರಾ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ…

775
firstsuddi

ಮೂಡಿಗೆರೆ : ವಾರ್ಷಿಕ ಕಾರ್ತಿಕ ದೀಪೋತ್ಸವ ಕೆಸವಳಲು ಮಹಾರುದ್ರಾ ದೇವಸ್ಥಾನದಲ್ಲಿ ವೈಭವದಿಂದ ಜರುಗಿತು. ಮಂಗಳವಾರ ರಾತ್ರಿ ದೀಪೋತ್ಸವದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಗ್ರಾಮದ ಭಕ್ತರು ದೇವಾಲಯದ ಆವರಣದಲ್ಲಿ ಸಾಮೂಹಿಕವಾಗಿ ಸಹಸ್ರಾರು ದೀಪದ ಹಣತೆಯನ್ನು ಹಚ್ಚಿ ಸಂಭ್ರಮಿಸಿದರು. ಇಂದು ಬೆಳಿಗ್ಗೆ ಮಹಾ ಮಂಗಳಾರತಿಯಾದ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ಸುತ್ತಮುತ್ತಲ ಗ್ರಾಮದ ಸಹಸ್ರಾರು ಭಕ್ತರು ದೇವಾಲಯಕ್ಕೆ ತೆರಳಿ ವಿಶೆಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ನಾರಾಯಣಾಚಾರ್, ಕೆ.ಕೆ. ರವಿ, ದಯಾನಂದ್, ವಿಜಯ್ ಕುಮಾರ್, ಜಗದೀಶ್, ಕೆ.ಎಸ್. ಜಯರಾಮ್, ಸುರೇಶ್ ಕೊಣಗೆರೆ, ದಯಾಕರ್, ಕೇಶವ, ಸುಮಂತ್ ಪಟೇಲ್, ಅಕ್ಷಯ್ ಪಟೇಲ್, ಸುಮಿತ್ರೇಗೌಡ, ಮಣೀಶ್ ದಾರದಹಳ್ಳಿ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.