ಮೂಡಿಗೆರೆ : ಗ್ಯಾಸ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಜನ್ನಾಪುರದಿಂದ ಸಕಲೇಶಪುರಕ್ಕೆ ತೆರಳುವ ರಸ್ತೆಯ ಹುರುಡಿ ಸೇತುವೆ ಬಳಿ ನಡೆದಿದೆ. ಮಂಗಳೂರಿನಿಂದ ಮೂಡಿಗೆರೆಗೆ ಬರುತ್ತಿದ್ದ ಲಾರಿ ಇಂದು ಮುಂಜಾನೆ 6ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಚಾಲಕ ಮತ್ತು ಕ್ಲೀನರ್ ನನ್ನು ಸ್ಥಳೀಯರು ಅಪಾಯದಿಂದ ಪಾರು ಮಾಡಿದ್ದು, ಈ ಕುರಿತು ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










