ಮೂಡಿಗೆರೆ : ಗ್ರಾಮೀಣ ಭಾಗದ ಮಕ್ಕಳಿಗೆ ಅವಿರತ ಟ್ರಸ್ಟ್ ನಿಂದ ಪುಸ್ತಕ ವಿತರಣೆ…

84
firstsuddi

ಕೊಟ್ಟಿಗೆಹಾರ : ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳ ಕಲಿಕೆಗೆ ಅವಿರತ ಟ್ರಸ್ಟ್ ಉಚಿತವಾಗಿ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವಿರತ ಟ್ರಸ್ಟ್ ನ ಪರವಾಗಿ ಸಾಹಿತಿ ಪೂರ್ಣೇಶ್ ಮತ್ತಾವರ ಹೇಳಿದರು.

ಮತ್ತಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ‘ಹದಿಮೂರು ವರ್ಷಗಳಿಂದ ಬೆಂಗಳೂರಿನ ಅವಿರತ ಟ್ರಸ್ಟ್ ಮೂಡಿಗೆರೆ ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಪ್ರತಿವರ್ಷ ನೋಟ್ ಪುಸ್ತಕಗಳನ್ನು ಪೂರೈಸಿ ಸರ್ಕಾರ ಮಾಡಬೇಕಾದ ಕೆಲಸ ಟ್ರಸ್ಟ್ ಮಾಡಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ’ ಈವರೆಗೆ 13 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿದ ಕೀರ್ತಿ ಅವಿರತ ಟ್ರಸ್ಟ್ ಗೆ ಸಲ್ಲುತ್ತದೆ’ ಎಂದರು.

ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತವಾಗಿ ನೋಟ್ ಪುಸ್ತಕಗಳನ್ನು ಟ್ರಸ್ಟ್ ನ ಪರವಾಗಿ ಸುನೀತ ನಟೇಶ್, ಅಶೋಕ್ ಮತ್ತಿಕಟ್ಟೆ, ಸುನಿಲ್, ರಂಜಿತ್ ಫಲ್ಗುಣಿ, ಎಚ್.ಎಂ.ವಿಶ್ವನಾಥ್, ರೇಖಾ ಪೂರ್ಣೇಶ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ವಿಠ್ಠಲ, ಲಕ್ಷ್ಮಿವೆಂಕಟೇಶ್, ಮಂಜು, ಶಿಕ್ಷಕ ರಘು ಮತ್ತಿತರರು ಇದ್ದರು.