ಮೂಡಿಗೆರೆ : ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿರುವ ಮಂಗಗಳಿಗೆ ಹಣ್ಣುಗಳನ್ನು ಹಾಕಿದ ಹಾವಳಿ ಪ್ರೆಂಡ್ಸ್ ವಾಟ್ಸ್‍ಅಪ್ ತಂಡ…

221
firstsuddi

ಬಣಕಲ್ : ಹಾವಳಿ ಪ್ರೆಂಡ್ಸ್ ವಾಟ್ಸ್‍ಅಪ್ ತಂಡದಿಂದ ಚಾರ್ಮಾಡಿ ಘಾಟ್‍ನಲ್ಲಿ ಮಂಗಗಳಿಗೆ ಹಣ್ಣುಗಳನ್ನು ಹಾಕಲಾಯಿತು.
ಚಾರ್ಮಾಡಿ ಘಾಟ್‍ನಲ್ಲಿ ರಸ್ತೆ ಬದಿಯಲ್ಲಿರುವ ಮಂಗಗಳಿಗೆ ಬಾಳೆಹಣ್ಣು, ಸೌತೆಕಾಯಿ, ಕ್ಯಾರೆಟ್, ಟೊಮೋಟೋ ಮೊದಲಾದ ಹಣ್ಣು ಹಾಗೂ ತರಕಾರಿಗಳನ್ನು ಮಂಗಗಳಿಗೆ ಹಾಕಲಾಯಿತು.
ಹಾವಳಿ ವಾಟ್ಸ್‍ಅಪ್ ತಂಡದ ಅಡ್ಮಿನ್ ನವೀನ್ ಹಾವಳಿ ಮಾತನಾಡಿ ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ಪ್ರವಾಸಿಗರು ನೀಡುವ ತಿಂಡಿ ತಿನಿಸುಗಳನ್ನು ನೆಚ್ಚಿಕೊಂಡಿದ್ದ ಮಂಗಗಳು ಆಹಾರ ಸಿಗದೇ ತೊಂದರೆಗೆ ಸಿಲುಕಿದ್ದವು. ಇದನ್ನು ಮನಗಂಡು ಮಂಗಗಳಿಗೆ ಹಣ್ಣು ಹಾಗೂ ಕೆಲ ತರಕಾರಿಗಳನ್ನು ಹಾಕಿದ್ದೇವೆ. ಪ್ರವಾಸಿಗರು ಕೂಡ ಪ್ಲಾಸ್ಟಿಕ್ ಪೊಟ್ಟಣದಲ್ಲಿರುವ ತಿಂಡಿಗಳ ಬದಲಾಗಿ ಹಣ್ಣುಗಳನ್ನು ನೀಡಿದರೆ ಒಳ್ಳೆಯದು. ಪ್ಲಾಸ್ಟಿಕ್ ಪೊಟ್ಟಣದಲ್ಲಿರುವ ತಿಂಡಿಗಳು ಮಂಗಗಳ ಜೀವಕ್ಕೆ ಮಾರಕವಾಗಬಹುದು ಎಂದರು.
ಈ ಸಂದರ್ಭದಲ್ಲಿ ಹಾವಳಿ ವಾಟ್ಸ್‍ಅಪ್ ತಂಡದ ಸದಸ್ಯರಾದ ಅವಿನಾಶ್, ಸಂದೇಶ್, ಸಂತೋಷ್, ಸತೀಶ್, ಸುಬ್ಬೆಗೌಡ, ಪುನೀತ್, ಅಪ್ಪಣ್ಣಿ, ಅಜಿತ್, ಪೃಥ್ವಿ, ನವೀನ್, ಶರತ್ ಮುಂತಾದವರು ಇದ್ದರು.