ಮೂಡಿಗೆರೆ : ಜ್ಯೂಸ್ ಎಂದು ತಿಳಿದು ಕಳೆನಾಶಕ ಕುಡಿದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ. ಪ್ರವೀಣ್-ಪೂಜಿತ ದಂಪತಿಯ ಏಕೈಕ ಪುತ್ರ ಅಗಸ್ತ್ಯ(3) ಮೃತ ಮಗು ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 24ರಂದು ಕಳೆನಾಶಕ ಸೇವಿಸಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 18 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










