ಕೊಟ್ಟಿಗೆಹಾರ : ದೇವರಮನೆಯ ಶ್ರೀಕಾಲ ಬೈರವೇಶ್ವರ ದೇವಸ್ಥಾನ ಹಾಗೂ ಬಣಕಲ್ನ ಕೃಷಿಪತ್ತಿನ ಸಹಕಾರ ಸಂಘದ ಕಚೇರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಭೇಟಿ ನೀಡಿದರು.
ದೇವರಮನೆಯ ಶ್ರೀ ಕಾಲಬೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದರು. ನಂತರ ಮಾತನಾಡಿದ ಅವರು ದೇವಸ್ಥಾನದ ಸುತ್ತ ತಡೆಗೋಡೆ ಹಾಗೂ ರಸ್ತೆ ಅಭಿವೃದ್ದಿಗೆ ಶ್ರಮಿಸಲಾಗುವುದು. ಮೂಡಿಗೆರೆ ನಗರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲೆಮನೆಯ ನೆರೆ ನಿರಾಶ್ರಿತರು ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರಿಗೆ ಶೀಘ್ರ ಪುನರ್ವಸತಿ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಬಣಕಲ್ನ ಕೃಷಿಪತ್ತಿನ ಸಹಕಾರ ಸಂಘದ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸಂಘದ ಕಟ್ಟಡವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘದ ವತಿಯಿಂದ ಸಂಘದ ಅಭಿವೃದ್ದಿಗೆ 50 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಎಸ್ ರಘು, ಪ.ಪಂ ಅಧ್ಯಕ್ಷ ಅನುಕುಮಾರ್, ಜಿ.ಪಂ ಸದಸ್ಯ ಶಾಮಣ್ಣ, ಸಂಘದ ಉಪಾಧ್ಯಕ್ಷ ರಂಗನಾಥ್, ನಿರ್ದೇಶಕರಾದ ಟಿ.ಎಂ ಗಜೇಂದ್ರ, ಲಕ್ಷ್ಮಿ, ಅಭಿಲಾಷ್, ಕಲ್ಲೇಶ್, ದಿಲ್ದಾರ್ ಬೇಗಂ, ಚಂದ್ರಶೇಖರ್, ನಾರಾಯಣಗೌಡ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನಿಶಾಂತ್, ವಿಕ್ರಂ, ಬಿಜೆಪಿ ಮುಖಂಡರಾದ ಸಂಜಯಗೌಡ, ಪರೀಕ್ಷಿತ್ ಜಾವಳಿ ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ದೇವರಮನೆಯ ಶ್ರೀಕಾಲ ಬೈರವೇಶ್ವರ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಭೇಟಿ.










