ಮೂಡಿಗೆರೆ : ನೆರೆ ಪರಿಹಾರ ವಿಚಾರವಾಗಿ ನಡುರಸ್ತೆಯಲ್ಲೇ ಕಂದಾಯ ಅಧಿಕಾರಿಗೆ ಜಿಲ್ಲಾಧಿಕಾರಿಯಿಂದ ಕಪಾಳಮೋಕ್ಷ…!

379

ಮೂಡಿಗೆರೆ : ನೆರೆ ಪರಿಹಾರದ ವಿಚಾರವಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಕಂದಾಯ ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕಳಸದ ಹಿರೇಬೈಲ್‍ನಲ್ಲಿ ನಡೆದಿದೆ. ತಾಲ್ಲೂಕಿನಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆಗೆ ಹಾನಿಯಾದ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಕಾರ್ಯದ ಬಿಲ್ ಪಾವತಿಯಾಗದ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳ ಬಳಿ ದೂರಿದ್ದರು. ಈ ಕುರಿತು ಜಿಲ್ಲಾಧಿಕಾರಿ ಕಂದಾಯ ಅಧಿಕಾರಿ ಅಜ್ಜೇಗೌಡರ ಬಳಿ ಸರ್ಕಾರದಿಂದ ಹಣ ಬಂದಿದೆ. ಇನ್ನು ಏಕೆ ಬಿಲ್ ಪಾವತಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕಂದಾಯ ಅಧಿಕಾರಿ ಸರಿಯಾಗಿ ಉತ್ತರ ನೀಡದೆ ಇದ್ದಾಗ ಕೋಪಗೊಂಡ ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಕಂದಾಯ ಅಧಿಕಾರಿಯ ಕೊರಳಿನ ಪಟ್ಟಿ ಹಿಡಿದು ಎಳೆದು ಕಪಾಳಮೋಕ್ಷ ಮಾಡಿದ್ದಾರೆ.