ಮೂಡಿಗೆರೆ : ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ : ಗ್ರಾ. ಪಂ ಅಧ್ಯಕ್ಷೆ ಸುನೀತಾ.

178
firstsuddi

ಕೊಟ್ಟಿಗೆಹಾರ : ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಬಿ.ಹೊಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಹೇಳಿದರು.

ಅವರು ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬರೀ ಗಿಡ ನೆಟ್ಟರೆ ಪ್ರಯೋಜನವಿಲ್ಲ. ಅದಕ್ಕೆ ನೀರುಣಿಸಿ ಪೋಷಿಸಿದರೆ ಮಾತ್ರ ಅದು ಮರವಾಗಿ ನಮಗೆ ನೆರಳು, ಫಲ ನೀಡುತ್ತದೆ. ಪರಿಸರ ಸ್ವಚ್ಛತೆಯಿಡುವುದರಿಂದ ನಮ್ಮ ಆರೋಗ್ಯವು ಸುಧಾರಣೆಯಾಗಿ ಕಾಯಿಲೆಗಳು ದೂರವಾಗುತ್ತವೆ ಎಂದರು.

ಉಪಾಧ್ಯಕ್ಷೆ ಸರಸ್ವತಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ನಮ್ಮ ಹೊಣೆಯಾಗಬೇಕು. ಪ್ರತಿಯೊಬ್ಬರು ಅರಣ್ಯ ಇಲಾಖೆ ನೀಡುವ ಉತ್ತಮ ಗಿಡಗಳನ್ನು ಪಡೆದು ಪರಿಸರ ಉಳಿಸುವ ಪ್ರಯತ್ನ ಮಾಡಬೇಕು. ಗಿಡಗಳನ್ನು ಪಡೆದು ಮನೆಯ ಮೂಲೆಯಲ್ಲಿಡದೇ ಅವುಗಳ ಉಪಯೋಗದಿಂದ ಮಾತ್ರ ಹಚ್ಚ ಹಸಿರ ಪರಿಸರವನ್ನು ನಾವು ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಹೆಚ್.ಎಂ.ಆಶ್ರಿತ್,ಗ್ರಾಮಸ್ಥರಾದ ವರುಣ್,ರವಿಶಂಕರ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.