ಮೂಡಿಗೆರೆ : ಬಣಕಲ್ ಸಹಕಾರ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ…

87
firstsuddi

ಕೊಟ್ಟಿಗೆಹಾರ : ಬಣಕಲ್ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಷ್ ಅವರಿಗೆ ಕೊಟ್ಟಿಗೆಹಾರದ ಸ್ಫೂರ್ತಿ ಮಿತ್ರ ಮಂಡಳಿ ಅಧ್ಯಯನ ಕೇಂದ್ರ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಅಭಿಲಾಷ್,  ರೈತರ ಸರ್ವಾಂಗೀಣ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಹಕಾರ ಸಂಘದ ಏಳಿಗೆ ಹಾಗೂ ರೈತರ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.

ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಸಹಕಾರ ಸಂಘಗಳು ರೈತಾಪಿ ವರ್ಗದ ಆರ್ಥಿಕ ಸಬಲತೆಗೆ ತಮ್ಮದೇ ಆದ ಕೊಡುಗೆ ನೀಡಿವೆ. ಮಲೆನಾಡು ಭಾಗದಲ್ಲಿ ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳ ಪಾತ್ರ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಬಕ್ಕಿ, ಉಪನ್ಯಾಸಕರಾದ ಭಕ್ತೇಶ್ ಕೊಟ್ಟಿಗೆಹಾರ, ಅವಿನಾಶ್ ತರುವೆ, ಸ್ಥಳೀಯರಾದ ಜೈಪಾಲ್ ಬಿನ್ನಡಿ, ಪ್ರದೀಪ್ ಬಿನ್ನಡಿ, ಕಿಶೋರ್, ಪಿ.ಕೆ. ಮಂಜುನಾಥ್ ಇದ್ದರು.