ಮೂಡಿಗೆರೆ : ಬಿಎಸ್‍ಪಿ ಪಕ್ಷದ ನಾಯಕಿ ಮಾಯಾವತಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನಿಡುವಾಳೆಯಲ್ಲಿ ಆರ್ಥಿಕ್ ಸಹಯೋಗ್ ದಿವಸ್‍ಗೆ ಚಾಲನೆ…

337
firstsuddi

ಮೂಡಿಗೆರೆ : ಮೂಡಿಗೆರೆ ಬಾಳೂರು ಹೋಬಳಿಯ ನಿಡುವಾಳೆಯಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಪಕ್ಷದ ನಾಯಕಿ ಮಾಯಾವತಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರ್ಥಿಕ್ ಸಹಯೋಗ್ ದಿವಸ್‍ಗೆ ಚಾಲನೆ ನೀಡಲಾಯಿತು.
ನಿಡುವಾಳೆಯಲ್ಲಿ ಸಂಚರಿಸಿ ಜನರಲ್ಲಿ ಜನಜಾಗೃತಿ ಮೂಡಿಸಿ ಪಕ್ಷದ ಆರ್ಥಿಕ ಸಹಯೋಗಕ್ಕೆ ಸಾರ್ವಜನಿಕರಿಂದ ಒಂದು ನೋಟು ಕೊಡಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಪ್ರಭಾಕರ್ ಬಿನ್ನಡಿ ಅವರು ಮಾಹಿತಿ ನೀಡುತ್ತಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಜನ್ಮದಿನ ಅಂಗವಾಗಿ ಆರ್ಥಿಕ್ ದಿವಸ್ ಆಚರಣೆ ಮಾಡಲಾಗುತ್ತಿದೆ. 20 ದಿನಗಳ ಕಾಲ ಕಾರ್ಯಕ್ರಮವನ್ನು ಜನಾಂದೋಲನ ಮಾದರಿಯಲ್ಲಿ ನಡೆಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವ ಯೊಜನೆ ಇದಾಗಿದ್ದು, ಪಕ್ಷದ ಆರ್ಥಿಕ ಸಂಪೂನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದ ‘ಬಹುಜನ ಪಕ್ಷಕ್ಕೆ ಒಂದು ನೋಟು, ಒಂದು ಓಟು’ ಎಂಬ ಯೋಜನೆ ರೂಪಿಸಲಾಗಿದೆ. ಮತದಾರರ ಬಳಿ ಹಣ ಸಂಗ್ರಹಣೆ ಮಾಡುವಾಗ ಪಕ್ಷದ ಸಿದ್ಧಾಂತಗಳನ್ನು ಪರಿಚಯಿಸುವ ಮೂಲಕ ಬಹುಜನ ಸಮಾಜವಾದಿ ಪಕ್ಷವನ್ನು ಬಂಬೆಲಿಸುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು. ಮುಂದಿನ 11 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಮೂಡಿಗೆರೆ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಸಂಚರಿಸಿ, ಸುಮಾರು ಹತ್ತು ಸಾವಿರ ಮತದಾರರನ್ನು ಸಂಪರ್ಕ ಮಾಡಿ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ನಿಧಿ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ನಿಧಿ ಸಂಗ್ರಹಣೆಗೆ ಉತ್ತಮ ಬೆಂಬ ವ್ಯಕ್ತವಾಗಿರುವುದು ಹೆಚ್ಚಿನ ಬಲ ಬಂದಂತಾಗಿದೆ ಎಂದರು.

ಜಾಗೃತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಮಹೇಶ್, ಹೋಬಳಿ ಸಂಯೋಜಕ ವಿಜಯ್,ಪ್ರಶಾಂತ್ ಪೂಜಾರಿ, ರಘು ಮಾಳಿಂಗನಾಡು, ಸುಂದರೇಶ್ ಇದ್ದರು.