ಮೂಡಿಗೆರೆ : ಭತ್ತದ ಗದ್ದೆಗೆ ನುಗ್ಗಿದ ಮಣ್ಣು, ಭತ್ತದ ಪೈರು ನಾಶ…

507
firstsuddi

ಮೂಡಿಗೆರೆ : ಈ ಬಾರಿ ವರುಣನ ಆರ್ಭಟಕ್ಕೆ ಮಲೆನಾಡಿನ ರೈತರು ಹೈರಾಣಾಗಿದ್ದು, ಒಂದೆಡೆ ಊರಿಗೆ ಊರೆ ಮುಳುಗಡೆಯಾದರೆ ಗದ್ದೆ ನಾಟಿ ಮಾಡಿದ್ದ ರೈತರ ಗದ್ದೆಗಳ ಮೇಲೆ ಮಳೆ ನೀರು ನುಗ್ಗಿದ್ದರ ಪರಿಣಾಮ ಗದ್ದೆಗಳಲ್ಲಿ ನಾಟಿ ಮಾಡಿದ್ದ ಸಸಿಗಳ ಮೇಲೆ ಮಣ್ಣು ಮತ್ತು ಮರಳು ನುಗ್ಗಿ ಸಸಿಗಳು ಸತ್ತುಹೋಗಿದ್ದು, ಗೋಣೀಬೀಡು, ಬಣಕಲ್, ಕಳಸ ಹೋಬಳಿಗಳ ಸುತ್ತ ಮುತ್ತಲ ಪ್ರದೇಶದ ರೈತರು ಆತಂಕಕೊಳಗಾಗಿದ್ದಾರೆ.
ಏತಕ್ಕೆ ಮಳೆ ಬಂತೋ ಶಿವಶಿವ ನಮ್ಮ ಜೀವನವನ್ನು ಹಾಳು ಮಾಡಿತ್ತಲ್ಲೊ ಎಂದು ಗೋಣಿಬೀಡಿನ ರೈತ ಚಂದ್ರಪ್ಪ ತನ್ನ ಗದ್ದೆಯ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ/ಭರತ್, ಮಣ್ಣು ಪರೀಕ್ಷಕ ತ್ರಜ್ಞ ಶಿವಕುಮಾರ್, ಕೃಷಿ ತ್ರಜ್ಞ ಕಿರಣ್ ಮತ್ತು ಅಕ್ರಂ ಚಂದ್ರಪ್ಪ ಸೇರಿದಂತೆ ಕೃಷ್ಣಯ್ಯ ಹಾಗೂ ತಮ್ಮಣ್ಣಗೌಡರಿಗೆ ಧೈರ್ಯ ತುಂಬಿದಾಗ ಕೆಲಸಗಾರರು ಸಿಗುವುದೇ ಕಷ್ಟ ಅಂತದರಲ್ಲಿ ನಟ್ಟಿ ಆಳುಗಳನ್ನು ಬಿಟ್ಟು ನಟ್ಟಿ ಮಾಡಿದಾಗ ಮೊದಲ ಮಳೆಗೆ ಬೀಜದ ಭತ್ತಗಳು ಹಾಳಾಗಿ ಹೋದವು. ಇದ್ದ ಅಲ್ಪ ಸ್ವಲ್ಪ ಬೀಜಗಳನ್ನು ನಟ್ಟಿ ಮಾಡಿದ್ದು, ಮತ್ತೆ ಮಳೆರಾಯನ ರೌದ್ರ ನರ್ತನಕ್ಕೆ ಸಸಿಗಳ ಮೇಲೆ ಮಣ್ಣು ಮರಳು ನುಗ್ಗಿ ಕೈಗೆ ಬಾರದಂತಾಗಿದೆ ಎಂದು ಅಳಲನ್ನು ತೋಡಿಕೊಂಡಾಗ, ಭರತ್ ರೈತ ಸಂಪರ್ಕ ಕೇಂದ್ರದಲ್ಲಿ ಕೆಪಿಆರ್ 1, ಎಕರೆಗೆ 10 ಕೆ.ಜಿ ಬೀಜದ ಭತ್ತಗಳನ್ನು ಪಡೆದುಕೊಳ್ಳುವಂತೆ ಮತ್ತೆ ತಮ್ಮಲ್ಲಿ ಪ್ಯಾಡಿ ಡ್ರಂಸೀಡರ್ ಮೂಲಕ ಒಬ್ಬರೇ ನಾಟಿಯನ್ನು ಮಾಡಬಹುದಾಗಿದ್ದು, ಉತ್ತಮ ಫಲ ಬರುತ್ತದೆ ಎಂದು ತಿಳಿಸಿ ರೈತರು ತಮ್ಮ ಕಚೇರಿಗೆ ಬಂದು ಬೇಟಿಯಾದಲ್ಲಿ ಕಡಿಮೆ ಬಾಡಿಗೆಗೆ 200 ರೂ ಪ್ಯಾಡಿ ಡ್ರಂ ಸೀಡರ್ ನೀಡಲಾಗುತ್ತಿದ್ದು, ಇದರ ಉಪಯೋಗವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.