ವಾಷಿಂಗ್‍ಟನ್ : ಮುಂಜಾನೆ 4 ಗಂಟೆಗೆ ಪ್ರಿಯತಮೆಯನ್ನು ಸೆಕ್ಸ್ ಮಾಡಲು ಕರೆದು ಮಲಗಿಕೊಂಡಿದ್ದಕ್ಕೆ ಕೋಪಗೊಂಡ ಮಹಿಳೆ ವಿಲ್ಸನ್(ಪ್ರಿಯಕರ) ನ ಮನೆಗೆ ಬೆಂಕಿ ಹಾಕಿರುವ ಘಟನೆ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದಿದೆ. ಬೆಂಕಿ ಹಚ್ಚಿದ ಮಹಿಳೆ ತೈಜಾ ರಸ್ಸೆಲ್ ಎನ್ನಲಾಗಿದ್ದು, ಫ್ಲೂಯಿಡ್ ಬಳಸಿ ಬೆಂಕಿ ಹಚ್ಚಿದ್ದು, ಮಲಗಿದ್ದ ವಿಲ್ಸನ್ 4:30ಕ್ಕೆ ಎಚ್ಚರಗೊಂಡಾಗ ಮನೆ ಒಳಗೆ ಬೆಂಕಿ ಕಾಣಿಸಿಕೊಂಡಿದ್ದು, ಹೊರ ಬರುವ ಬಾಗಿಲಿಗೂ ಸಮೇತ ಬೆಂಕಿ ಆವರಿಸಿದ್ದು, ಹೀಗಾಗಿ ರೂಮಿನ ಕಿಟಕಿಯ ಮೂಲಕ ಹೊರಬಂದು ಪ್ರಾಣಾಪಾಯದಿಂದ ಪಾರಾಗಿ ನಿವಾಸಕ್ಕೆ ಸಮೀಪವಿದ್ದ ವುಡ್‍ಬರಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದ ಅರೆಬರೆ ಸುಟ್ಟ ವಿಲ್ಸನ್‍ನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸ್ ತನಿಖೆ ವೇಳೆ ನಾನು ಹಾಗೂ ತೈಜಾ ರಸ್ಸೆಲ್ ಹಲವು ತಿಂಗಳಿಂದ ಆಗಾಗ ದೈಹಿಕ ಸಂಪರ್ಕ ನಡೆಸುತ್ತಿದ್ದೆ. ಆದರೆ ಈ ನಡುವೆ ದಿನ ಪೀಡಿಸುತ್ತಿದ್ದಳು. ಅದರಂತೆ ಮುಂಜಾನೆ 4 ಗಂಟೆಗೆ ಸೆಕ್ಸ್ ಮಾಡುವುದಾಗಿ ಬರಹೇಳಿದ್ದೆ ಎಂದು ಹೇಳಿದ್ದಾರೆ. ಮಹಿಳೆ ಮನೆಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










