ಮೂಡಿಗೆರೆ : ಈ ಬಾರಿ ಸುರಿದ ಭಾರಿ ಮಳೆಗೆ ಮಲೆನಾಡು ಜನ ತತ್ತರಿಸಿದ್ದು, ಮಲೆಮನೆ ಸಮೀಪದ ರೇಖಾ ಎಂಬುವವರ ಮನೆ ಹಾಗೂ 6 ಎಕರೆ ಕಾಫಿ ತೋಟ ಕೊಚ್ಚಿಹೋಗಿದ್ದು, ಅವರಿಗೆ ಕ್ರಿಯೇಟಿವ್ ಮೈಂಡ್ ಹಾಗೂ ನಮ್ಮುಡುಗ್ರು ತಂಡದ ಯುವಕರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ನಿತ್ಯ ಬಳಕೆಯ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್, ಪತ್ರಕರ್ತರಾದ ಸುನೀಲ್, ಬಿಜೆಪಿ ಯುವ ಮುಖಂಡ ಅನಿಲ್, ಲೋಹಿತ್, ಲೋಕೇಶ್, ಮಧು ಇದ್ದರು.










