ಬೆಳಗಾವಿ : ನಗರದಲ್ಲಿ ಯುವತಿಯೊಬ್ಬಳು ಬೆತ್ತಲೆ ಬೈಕ್ ರೈಡ್ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ದಿನದ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಘಟನೆ ಇದಾಗಿದ್ದು, ನಡುರಸ್ತೆಯಲ್ಲೇ ಯುವಕನ ಹಿಂಬದಿಯಲ್ಲಿ ಕುಳಿತಿದ್ದ ಬೆತ್ತಲಾದ ಯುವತಿ ಯುವಕನನ್ನು ಕೆಳಗೆ ಇಳಿಸಿ ನಗರದ ಚೆನ್ನಮ್ಮ ವೃತ್ತ ಮತ್ತು ಕ್ಲಬ್ ರಸ್ತೆಯ ಮಾರ್ಗವಾಗಿ ಹೋಂಡಾ ಆಕ್ಟೀವಾವನ್ನು ತಾನೇ ರೈಡ್ ಮಾಡಿಕೊಂಡು ಹೋಗಿರುವ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕುಡಿದ ಅಮಲಿನಲ್ಲಿ ಬೆಟ್ಟಿಂಗ್ ಕಟ್ಟಿ ಯುವತಿ ಮತ್ತು ಗೆಳೆಯರ ಗುಂಪು ಈ ರೀತಿ ವರ್ತಿಸಿರಬಹುದು ಎಂಬ ಸಂಶಯ ಸ್ಥಳೀಯರಲ್ಲಿ ಮೂಡಿದೆ. ಬೆಳಗಾವಿ ಪೊಲೀಸರು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವೀಡಿಯೋದ ಬಗ್ಗೆ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.










