ಮೂಡಿಗೆರೆ : ಮಾಜಿ ಶಾಸಕ ಹೆಬ್ರಿ ಗೋಪಾಲ ಭಂಡಾರಿ ಅವರ ನಿಧನಕ್ಕೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸಂತಾಪ…

328
firstsuddi

ಮೂಡಿಗೆರೆ: ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮೂಡಿಗೆರೆಯಲ್ಲಿ ಇಂದು ಇತ್ತೀಚಿಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತವಾಗಿ ನಿಧನರಾದ ಮಾಜಿ ಕಾಂಗ್ರೇಸ್ ಶಾಸಕ ಹೆಬ್ರಿ ಗೋಪಾಲ ಭಂಡಾರಿಯವರಿಗೆ ಸಂತಾಪ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಆಗಿರುವ ಬಿ.ಎಸ್.ಜಯರಾಂ ಅವರು ಮಾತನಾಡಿ ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಭಂಡಾರಿಯವರು ಕಾಂಗ್ರೆಸ್‍ಗೆ ಅಪಾರ ಕೊಡುಗೆಯನ್ನು ಕೊಟ್ಟಿದ್ದು, ಇವರ ಮರಣದಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಷ್ಟವಾಗಿದೆ ಎಂದರು.
ದಿವಂಗತ ಶಾಸಕರು ನಮ್ಮ ಚಿಕ್ಕಮಗಳೂರಿನಲ್ಲಿ ಚುನಾವಣೆ ಉಸ್ತುವಾರಿಯನ್ನು ನೋಡಿಕೊಂಡಿದ್ದು, ಅದರಂತೆ ಇವರು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಇವರು ಎರಡು ಭಾರಿ ಕಾರ್ಕಳದಿಂದ 1999 ಹಾಗೂ 2008 ರಲ್ಲಿ ವಿದಾನಸಭಾ ಸದಸ್ಯರಾಗಿ ದಕ್ಷ ಆಡಳಿತವನ್ನು ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬೇಕು ಎಂದರು. ನಮ್ಮನ್ನಗಲಿ ಹೋದಂತಹ ಇವರ ಆತ್ಮಕ್ಕೆ ಆ ದೇವರು ಚಿರಶಾಂತಿಯನ್ನು ಕೊಡಲಿ ಎಂದು ಈ ಸಂದರ್ಭದಲ್ಲಿ ಅವರನ್ನು ನೆನದು ಸಂತಾಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಜಿ.ಸುರೇಂದ್ರ, ಪ್ರಧಾನ ಕಾರ್ಯದರ್ಶಿ ಸಂಪತ್ ಬಿಳಗುಳ, ಹಳೇ ಮೂಡಿಗೆರೆ ಸಹಕಾರಿ ಬ್ಯಾಂಕ್ ನಿರ್ಧೇಶಕ ಎಂ.ಕೆ.ಶಣ್ಮುಕಾನಂದ ಭಂಡಾರಿ, ಪ.ಪಂಚಾಯತಿ ಸದಸ್ಯ ಹೆಚ್.ಪಿ.ರಮೆಶ್, ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಹಾಗೂ ಇನ್ನಿತರರಿದ್ದರು.