ಮೂಡಿಗೆರೆ : ಮ್ಯಾನ್‍ಕೈಂಡ್ ಕ್ಲಬ್ ವತಿಯಿಂದ ಅನಾಥಾಶ್ರಮಕ್ಕೆ ಅಗತ್ಯ ವಸ್ತುಗಳ ನೆರವು…

495
firstsuddi

ಕೊಟ್ಟಿಗೆಹಾರ : ಬಣಕಲ್‍ನ ಮ್ಯಾನ್‍ಕೈಂಡ್ ಕ್ಲಬ್ ವತಿಯಿಂದ ಎನ್.ಆರ್.ಪುರದ ಅರಳಿಕೊಪ್ಪದ ದಿವ್ಯ ಕಾರುಣ್ಯ ಗುರುಕುಲಂ ಅನಾಥಾಶ್ರಮಕ್ಕೆ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಬಣಕಲ್ ಮ್ಯಾನ್‍ಕೈಂಡ್ ಕ್ಲಬ್‍ನ ಸಾಜಿದ್ ಮಾತನಾಡಿ ಇಡಿ ವಿಶ್ವವೂ ಕಾರೊನಾ ವೈರಸ್‍ನಿಂದ ಆತಂಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಬಡ ವರ್ಗದ ನೆರವಿಗೆ ಉಳ್ಳವರು ಬರಬೇಕಿದೆ. ಈ ಆಶ್ರಮದಲ್ಲಿ 43 ಮಂದಿ ಅನಾಥರಿದ್ದು ಇವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಇಂದು ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ್ದೇವೆ ಎಂದರು.
ಬಣಕಲ್ ಮ್ಯಾನ್‍ಕೈಂಡ್ ಕ್ಲಬ್‍ನ ವೆಂಕಟೇಶ್ ಹೆಸಗಲ್ ಮಾತನಾಡಿ ಈ ಆಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ದಿನನಿತ್ಯದ ಊಟ, ಔಷಧಿ ಹಾಗೂ ಸೂರನ್ನು ಒದಗಿಸಲು ಸಾಕಷ್ಟು ನೆರವಿನ ಅಗತ್ಯವಿದ್ದು ದಾನಿಗಳು ನೆರವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ದಿವ್ಯ ಕಾರುಣ್ಯ ಗುರುಕುಲಂನ ಆನಂದಸ್ಯಾಮಿ, ಲಿಸ್ಸಿ, ಮ್ಯಾನ್‍ಕೈಂಡ್ ಕ್ಲಬ್‍ನ ಪ್ರವೀಣ್ ದಾಸರಹಳ್ಳಿ, ಪ್ರಶಾಂತ್ ಪೂಜಾರಿ ಚೇಗು, ಪಾಝೀಲ್ ಮುಂತಾದವರು ಇದ್ದರು.