ಯುವಜನರು ಕ್ರೀಯಾಶೀಲರಾದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪಿಸಲು ಸಾಧ್ಯ : ಡಿ.ಟಿ.ನವೀನ್ ಕುಮಾರ್.

76
firstsuddi

ಕೊಟ್ಟಿಗೆಹಾರ : ಜೆಸಿಐ ವ್ಯಕ್ತಿತ್ವ ವಿಕಸನದ ಜತೆಗೆ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ದಿಗೆ ಸೇವೆ ನೀಡುತ್ತಿದೆ ಎಂದು ಜೆಸಿಐನ ನಿಕಟಪೂರ್ವ ವಲಯಾಧ್ಯಕ್ಷೆ ಸಮತಾ ಮಿಸ್ಕಿತ್ ಹೇಳಿದರು.

ಬಣಕಲ್ ನಲ್ಲಿ ಇಂದು ಸಂಜೆ ನಡೆದ ಜೆಸಿಐ ವಿಸ್ಮಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಬಣಕಲ್ ಜೆಸಿಐ ವಿಸ್ಮಯವು ಸಾಮಾಜಿಕ ಸೇವೆಯಲ್ಲಿ ದೇಶದಲ್ಲಿ ಐದನೇ ಸ್ಥಾನ ಪಡೆದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಜೆಸಿಐ ಬಣಕಲ್ ವಿಸ್ಮಯದ ಅಧ್ಯಕ್ಷ ಡಿ.ಟಿ.ನವೀನ್ ಕುಮಾರ್ ಮಾತನಾಡಿ, ಜೆಸಿಐನಿಂದ ಹಲವು ಸಾಮಾಜಿಕ ಕಾರ್ಯ ನಡೆಸಲಾಗಿದೆ. ಯುವಜನರು ಕ್ರೀಯಾಶೀಲರಾದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತದೆ. ಸಂಸ್ಥೆಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ ಎಂದರು.

ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಯೋಗ ಶಿಕ್ಷಕಿ ಸುಲೋಚನಾ ಹಾಗೂ ಯುವಕವಿ ನಂದೀಶ್ ಬಂಕೇನಹಳ್ಳಿ ಅವರನ್ನು ಜೆಸಿಐ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ವಿಜಯಕುಮಾರ್, ಸಪ್ತಾಹ ನಿರ್ದೇಶಕ ಶರತ್ ಫಲ್ಗುಣಿ, ಕಾರ್ಯದರ್ಶಿ ಸುರೇಂದ್ರ, ಜೂನಿಯರ್ ಜೇಸಿ ಅಧ್ಯಕ್ಷ ಸಂಯಮ್, ಜೇಸಿರೇಟ್ ಅಧ್ಯಕ್ಷೆ ಮಧುರಾಕವೀಶ್, ನಿಕಟಪೂರ್ವ ಅಧ್ಯಕ್ಷರಾದ ರವಿವಾಟೇಖಾನ್, ಎನ್.ಟಿ.ದಿನೇಶ್, ಟಿ.ಎಂ.ಗಜೇಂದ್ರ, ಬಿ.ಎ.ಕವೀಶ್, ರವಿಪಟೇಲ್, ರವಿಶಂಕರ್, ಯುವ ಮುಖಂಡರಾದ ಸಂಜಯ್‍ಗೌಡ, ಎ.ಆರ್.ಅಭಿಲಾಷ್ ಇದ್ದರು.