ಮೂಡಿಗೆರೆ : ರೀಚ್ ಟು ಲೈಫ್ ಟ್ರಸ್ಟ್ ನಿಂದ ಪಟ್ಟಣದ 5 ನೇ ವಾರ್ಡ್ ಗೆ ಆಹಾರ ಕಿಟ್ ವಿತರಣೆ…

186
firstsuddi

ಮೂಡಿಗೆರೆ : ಕೊರೋನಾ ಮಹಾಮಾರಿಯಿಂದ ಇಡೀ ದೇಶವೇ ತತ್ತರಿಸಿದ್ದು, ಕಳೆದ 2 ತಿಂಗಳಿನಿಂದ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರದಿದ್ದು, ದಿನಗೂಲಿ ಕಾರ್ಮಿಕರು ಹಾಗೂ ನಿರ್ಗತಿಕರ ಪರಿಸ್ಥಿತಿ ಹೇಳತೀರದಂತಾಗಿದೆ. ಈ ಹಿನ್ನೆಲೆ ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್ ರವರು ರೀಚ್ ಟು ಲೈಫ್ ಟ್ರಸ್ಟ್ ನ ನೆರವಿನೊಂದಿಗೆ ಮೂಡಿಗೆರೆ ಪಟ್ಟಣದ 5 ನೇ ವಾರ್ಡ್ ನಲ್ಲಿರುವ ಬಡವರಿಗೆ ಉಪಸಭಾಪತಿ ಎಂ.ಕೆ ಪ್ರಾಣೇಶ್ರವರ ಸಮ್ಮುಖದಲ್ಲಿ ಆಹಾರಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪಸಭಾಪತಿ ಎಂ.ಕೆ ಪ್ರಾಣೇಶ್ ಅವರು ಇಂತಹ ಪರಿಸ್ಥಿತಿಯಲ್ಲಿ ರೀಚ್ ಟು ಲೈಫ್ ಟ್ರಸ್ಟ್ ಸಂಸ್ಥೆ ಬಡವರಿಗೆ ನೆರವಾಗುವುದರ ಜೊತೆಗೆ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಇನ್ನು ಮುಂದೆಯೂ ಸಹ ಇವರು ಸಮಾಜ ಸೇವೆ ಮುಂದುವರೆಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ ರೀಚ್ ಟು ಲೈಫ್ ಟ್ರಸ್ಟ್ ಕೊರೋನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಇಂತಹ ಹಲವಾರು ಸಾಮಾಜಿಕ ಕಳಕಳಿಯಿರುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಈಗಾಗಲೇ ಹಲವರು ಬಡ ಶಾಲೆಗಳನ್ನು ದತ್ತುಪಡೆದುಕೊಳ್ಳುವ ಮೂಲಕ ಎಲ್ಲಾ ತರಹದ ಸೌಕರ್ಯಗಳನ್ನು ನೀಡುತ್ತಾ ಬಂದಿದೆ. ಕೊರೋನಾ ಸಮಯದಲ್ಲಿ ಬಡವರ ಸಮಸ್ಯೆಗಳಿಗೆ ಇನ್ನಷ್ಟು ಸ್ಪಂಧಿಸುವಂತಹ ಕೆಲಸ ಮಾಡುವುದಾಗಿ ರೀಚ್ ಟು ಲೈಫ್ ಟ್ರಸ್ಟ್ ನ ಮುಖ್ಯಸ್ಥೆ ಕೃತಿಕಾ ಎಂದರು.

ಇನ್ನೂ ಇದೇ ವೇಳೇ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಕುಮಾರ್, ಬಿಜೆಪಿ ಮುಖಂಡ ಜಗದೀಪ್ ಹಂಡುಗುಳಿ, ಸಮಾಜ ಸೇವಕ ದೀಪಕ್, ಬಿಜೆಪಿ ಯುವ ಮುಖಂಡ ಬಾಲುಶೆಟ್ಟಿ, ಲೋಹಿತ್ ಹಾಗೂ ರೀಚ್ ಟು ಲೈಫ್ ಟ್ರಸ್ಟ್ ನ ಸದಸ್ಯರುಗಳಾದ ಸ್ವಾತಿ, ಪುಟ್ಟಸ್ವಾಮಿ, ರುದ್ರೇಶ್ ಭಜರಂಗಿ, ರಂಜಿತ್, ಪ್ರತಾಪ್ ಮುಂತಾದವರು ಇದ್ದರು.