ಮೂಡಿಗೆರೆ : ರೈತ ಉತ್ಪಾದಕ ಸಂಘದಿಂದ ಸಮಗ್ರ ಅಭಿವೃದ್ದಿ ಸಾಧ್ಯ : ನವೀನ್‍ಕುಮಾರ್.

286
firstsuddi

ಕೊಟ್ಟಿಗೆಹಾರ : ರೈತ ಉತ್ಪಾದಕ ಸಂಘದಿಂದ ರೈತಾಪಿ ವರ್ಗದ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಸ್ಪೈಸಸ್ ಪ್ಲಸ್‍ನ ರೈತ ಉತ್ಪಾದಕ ಸಂಘದ ನಿರ್ದೇಶಕರಾದ ನವೀನ್‍ಕುಮಾರ್ ಹೇಳಿದರು.

ಸಂಘದ ಆಡಳಿತ ಮಂಡಳಿಯ ಸದಸ್ಯರಿಗೆ ಶಿರಸಿ ಭಾಗದ ಸಹಕಾರ ಸಂಘಗಳಿಗೆ ಬೇಟಿ, ತರಬೇತಿ ಹಾಗೂ ಅಧ್ಯಯನ ಪ್ರವಾಸಕ್ಕೆ ಮೂಡಿಗೆರೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಮಾಹಿತಿ, ಮಾರ್ಗದರ್ಶನ, ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸುವುದು ಸಂಘದ ಉದ್ದೇಶವಾಗಿದೆ. ಉತ್ತಮ ಮಾರುಕಟ್ಟೆಯ ಸೌಲಭ್ಯಗಳು ಮತ್ತು ಇತರೆ ಸೇವೆಗಳನ್ನು ಖಾತ್ರಿಗೊಳಿಸಲು ಸ್ಪೈಸಸ್ ಪ್ಲಸ್‍ನ ರೈತ ಉತ್ಪಾದಕ ಸಂಘವು ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಿದೆ ಎಂದರು

ವಾಯ್ಸ್ ಸಂಸ್ಥೆಯ ನಿರ್ದೇಶಕರಾದ ಸಂತೋಷ್ ಡಿ.ಕೆ ಮಾತನಾಡಿ, ಲಾಭಗಳಿಸುವುದರೊಂದಿಗೆ ಸೇವೆಗಳನ್ನು ನೀಡುವುದು, ಸ್ಪರ್ದೆಯ ಬದಲು ಪರಸ್ಪರ ಸಹಕಾರವನ್ನು ನೀಡುವುದು, ಪರಾವಲಂಬನೆಯ ಬದಲು ಸ್ವಸಹಾಯವನ್ನು ಸಾಧಿಸುವುದು ಸ್ಪೈಸಸ್ ಪ್ಲಸ್‍ನ ರೈತ ಉತ್ಪಾದಕ ಸಂಘದ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಪೈಸಸ್ ಪ್ಲಸ್‍ನ ರೈತ ಉತ್ಪಾದಕ ಸಂಘದ ನಿರ್ದೇಶಕರಾದ ನಾಝೀಮ್, ಮಂಜುಳಾ, ಜಯಂತಿ, ತಾರಾನಾಥ್, ರಂಜಿತ್, ಅಭಿಜಿತ್, ಕುಸುಮ, ವಾಯ್ಸ್ ಸಂಸ್ಥೆಯ ಸಂಯೋಜಕರಾದ ಪುನೀತ್, ರೈತರಾದ ದೀಕ್ಷಿತ್, ವಿಜಯಲಕ್ಷ್ಮಿ ಮುಂತಾದವರು ಇದ್ದರು.