ಮೂಡಿಗೆರೆ : ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಸಂತ್ರಸ್ಥರ ನೆರವಿಗೆ ಬರಲಿ : ಮಾಜಿ ಸಿಎಂ ಹೆಚ್.ಡಿ ಕಮಾರಸ್ವಾಮಿ.

344
firstsuddi

ಮೂಡಿಗೆರೆ : ಮಾಜಿ ಸಿಎಂ ಹೆಚ್.ಡಿ ಕಮಾರಸ್ವಾಮಿ ಅವರು ಭಾರಿ ಮಳೆಯಿಂದ ಭೂ ಕುಸಿತ ಹಾಗೂ ಗುಡ್ಡ ಕುಸಿತವಾದ ಸ್ಥಳಗಳಿಗೆ ಬೇಟಿ ನೀಡಿದ್ದು, ನೆರೆ ಪೀಡಿತ ಪ್ರದೇಶಗಳಾದ ಮಲೆಮನೆ ಹಾಗೂ ದುರ್ಗದಹಳ್ಳಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ಥರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡರು. ಮಲೆಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಸಂತ್ರಸ್ಥರ ನೆರವಿಗೆ ಬರಲಿ. ಪ್ರವಾಹದಿಂದ ಭೂಮಿ ಕಳೆದುಕೊಂಡವರು ಶ್ರೀಮಂತರಲ್ಲ. 2-3 ಎಕರೆ ಜಾಗ ಹೊಂದಿರುವ ಸಣ್ಣ ಸಣ್ಣ ರೈತರು. ಮನೆಗಳನ್ನು ಕಳೆದುಕೊಂಡು ಜನರು ಬೀದಿಗೆ ಬೀಳುವಂತಾಗಿದೆ. ಮುಖ್ಯಮಂತ್ರಿ ತಕ್ಷಣ ಬಂದು ಹಾನಿಗೀಡಾದ ಪ್ರದೇಶಗಳನ್ನ ವೀಕ್ಷಣೆ ಮಾಡಲಿ.
ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ನೀಡಿದ್ರೆ ಸಾಲದು, ಶಾಶ್ವತವಾಗಿ ಪರಿಹಾರ ನೀಡುವಂತಹ ಕೆಲಸ ಮಾಡಬೇಕು. ಹಾಗೂ ಕೃಷ್ಣಾ ಕಚೇರಿಯನ್ನು ವರ್ಗಾವಣೆ ಮಾಡುವ ಹಾಗೂ ದಂಧೆ ಮಾಡುವ ಕೇಂದ್ರ ಮಾಡಿಕೊಂಡಿದ್ದಾರಲ್ಲ,? ನಾಚಿಕೆಯಾಗಲ್ವಾ ಎಂದು ಕಿಡಿಕಾರಿದರು.