ಮೂಡಿಗೆರೆ : ಹಾಲೂರಿನಲ್ಲಿ ನೀರುಪಾಲಾದ ಯುವಕನ ಪತ್ತೆಗೆ ಮುಂದುವರೆದ ಶೋಧ…

1004

ಮೂಡಿಗೆರೆ : ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ಮಧ್ಯಾಹ್ನ ತಾಲ್ಲೂಕಿನ ಹಾಲೂರಿನಲ್ಲಿ ನೀರುಪಾಲಾದ ಶ್ರೀಹರ್ಷ(22) ಶೋಧಕಾರ್ಯ ಮುಂದುವರೆದಿದ್ದು, ನಿನ್ನೆ ಮಧ್ಯಾಹ್ನ ಹಾಲೂರು ನಂಜಪ್ಪ ಎಂಬುವವರ ಮೊಮ್ಮಗ ನಾಲ್ಕು ದಿನದ ಹಿಂದೆ ಹೇಮಾವತಿ ನದಿ ಪಕ್ಕ ಜಮೀನಿನಲ್ಲಿ ಟ್ರಿಲ್ಲರ್ ಬಿಟ್ಟು ಬಂದಿದ್ದು, ಮಳೆ ಜಾಸ್ತಿಯಾದ ಕಾರಣ ಅದನ್ನು ಬೇರೆಡೆ ನಿಲ್ಲಿಸಲು ತೆರಳಿದ್ದ ಎನ್ನಲಾಗಿದ್ದು, ನೀರಿನ ತೀವ್ರತೆಯನ್ನು ಅರಿಯದೇ ಯುವಕ ಕೊಚ್ಚಿ ಹೋಗಿದ್ದು, ನಿನ್ನೆ ಮಧ್ಯಾಹ್ನದಿಂದ ಯುವಕನ ಶೋಧಕಾರ್ಯ ನಡೆಯುತ್ತಿದ್ದು, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರಾದ ಫಿಶ್ ಮೋಣು, ಬಿಳಗುಳ ಹಸೇನರ್, ಅಬ್ದುಲ್ ರೆಹಮಾನ್ ಹಾಗೂ ಅಲ್ತಾಫ್ ಬಿಳಗುಳ ಕಾರ್ಯಾಚರಣೆ ನಡೆಸುತ್ತಿದ್ದು, ಮೂಡಿಗೆರೆ ತಹಾಶೀಲ್ದಾರ್ ರಮೇಶ್ ಹಾಗೂ ತಾಲ್ಲೂಕು ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.