ಬೆಂಗಳೂರು : ಸ್ಯಾಂಡಲ್ ವುಡ್ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಇಂದು ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ರಾಧಿಕ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಯಶ್ ಅವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಅದಕ್ಕೆ “ ನಮಗೆ ನೆನಪಿಸಲು ನಾನು ಹಳೆಯ ಫೊಟೋವನ್ನು ಹಂಚಿಕೊಂಡಿದ್ದೇನೆ. ಇದು ಕೇವಲ ಮೂರು ವರ್ಷದ ಮದುವೆಯಲ್ಲ. ಇದು ಸಂಬಂಧವನ್ನು ನಿರ್ಮಿಸಿದ ಹಲವು ವರ್ಷಗಳು. ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. 2016 ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹವಾಗಿದ್ದರು.










