ಮೈಸೂರು : ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾನೆ.
ಆಗಸ್ಟ್ 24ರ ಸಂಜೆ 7.25 ರಿಂದ 7.30ರ ಸುಮಾರಿಗೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್ ಬಳಿ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ಯಾವಾಗಲೂ ವಾಕಿಂಗ್ ಗೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 6 ಮಂದಿ ಬಂದರು. ದೊಣ್ಣೆಗಳಿಂದ ಹಲ್ಲೆ ಮಾಡಿದರು. ನನ್ನ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ನಾನು ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದೆ ಎಂದಿದ್ದಾನೆ.
ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. ನಂತರ ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ಆ ಸಂದರ್ಭದಲ್ಲಿ ನಾನು ಗೆಳತಿ ಎಲ್ಲಿ? ಎಂದು ಕೇಳಿದೆ. ಆಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು ಎಂದು ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.










