ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಉಲ್ಟಾ ಹೊಡೆದ ಸಿಡಿ ಲೇಡಿ..!

124
Firstsuddi

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತ ಯುವತಿ ಉಲ್ಟಾ ಹೊಡೆದಿದ್ದಾರೆ. ಇಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಯುವತಿ ಜಾರಕಿಹೊಳಿ ವಿರುದ್ಧ ನನ್ನ ಹೇಳಿಕೆ ಪೂರ್ಣ ಸತ್ಯವಲ್ಲ. ನಾನು ಹನಿಟ್ಯ್ರಾಪ್ ಆಗಿದ್ದೆ. ನನ್ನನ್ನು ಹನಿಟ್ರ್ಯಾಪ್ ಮಾಡಿದ್ದೇ ನರೇಶ್ ಗೌಡ ಹಾಗೂ ಶ್ರವಣ್ ಎಂದು ತನಿಖಾಧಿಕಾರಿ ಕವಿತಾ ಮುಂದೆ ಹೇಳಿಕೆ ಕೊಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನಲೆ ಸೆಕ್ಷನ್ 164 ಅಡಿಯಲ್ಲಿ ಯುವತಿ ಮರು ಹೇಳಿಕೆ ಪಡೆಯುವ ಸಾಧ್ಯತೆಗಳಿದ್ದು, ಮತ್ತೊಮ್ಮೆ ಸಿಡಿ ಯುವತಿಯನ್ನು ಜಡ್ಜ್ ಮುಂದೆ ಹಾಜರುಪಡಿಸಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.