ಬೆಂಗಳೂರು : ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್ ಚಿತ್ರ ಮೊದಲ ದಿನವೇ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ಚಿತ್ರ ಅಬ್ಬರಿಸಿದ್ದು, ಕೇವಲ ಥಿಯೇಟರ್ ಗಳಲ್ಲಿ ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸಹ ಧೂಳೆಬ್ಬಿಸಿದೆ.
ಬೆಂಗಳೂರು, ಕೋಲಾರ, ತುಮಕೂರು, ದಕ್ಷಣ ಕನ್ನಡ ಸೇರಿ 7 ಕೋಟಿ ಕಲೆಕ್ಷನ್ ಆಗಿದೆ. ಮಂಡ್ಯ, ಮೈಸೂರು ಹಾಗೂ ಚಕ್ಕಮಗಳೂರು ಜಿಲ್ಲೆಗಳಿಂದ 2 ಕೋಟಿ ರೂ. ಗಳಿಕೆ ಆಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 2.24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹೈದರಾಬಾದ್ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕ ಕ್ರಮವಾಗಿ 3 ಕೋಟಿ ರೂ,ಮತ್ತು 2 ಕೋಟಿ ರೂ ಹಣವನ್ನು ಗಳಿಸಿದೆ. ಇದನ್ನು ಸಿನಿಮಾ ತಂಡವೇ ಅನೌನ್ಸ್ ಮಾಡಿದ್ದು, ಎಲ್ಲೆಡೆ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗಿದ್ದು, ರಾಬರ್ಟ್ ಮೂಲಕ ದಚ್ಚುನ ಗ್ರ್ಯಾಂಡ್ ಎಂಟ್ರಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ. ರಾಬರ್ಟ್ ಸಿನಿಮಾ ಹಾಡುಗಳೂ ಸಹ ಸೂಪರ್ ಹಿಟ್ ಆಗಿವೆ. ತೆಲುಗು ವರ್ಷನ್ ಮತ್ತು ಕನ್ನಡ ವರ್ಷನ್ ಹಾಡುಗಳು ಎಲ್ಲೆಡೆ ವೈರಲ್ ಆಗಿ ಸದ್ದು ಮಾಡುತ್ತಿದ್ದು, ಸಿನಿಮಾ ವೀಕ್ಷಣೆಗೆ ಚಿತ್ರಮಂದಿರಗಳತ್ತ ದಚ್ಚು ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳ ದಂಡು ಹರಿದು ಬರುತ್ತಿದೆ.










