ರಾಮನಗರ : ಮಚ್ಚಿನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ…

60
firstsuddi

ರಾಮನಗರ : ಮಚ್ಚಿನಿಂದ ಹೊಡೆದು ಮಹಿಳೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ.

ಜಯಮ್ಮ(65) ಎಂಬುವರು ಕೊಲೆಯಾದ ಮಹಿಳೆ. ಇಂದು ಮುಂಜಾನೆ 6 ಗಂಟೆಗೆ ಈ ಘಟನೆ ನಡೆದಿದೆ. ಜಯಮ್ಮನ ಮಗ ಸಿದ್ದರಾಜು ಮೇಲೆ ಕೂಡ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಜಯಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಗೊಂಡ ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಸಂಬಂಧಿಕರೊಬ್ಬರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಅಕ್ಕೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.