ರಾಷ್ಟ್ರೀಯ ಲಾಂಛನ : ಪ್ರಕಾಶ್ ರೈ ಆಕ್ಷೇಪ, ಅನುಪಮ್ ಖೇರ್ ಬೆಂಬಲ…

71
firstsuddi

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪ ಅನಾವರಣಗೊಳಿಸಿದ್ದು, ಈ ಶಿಲ್ಪ ಅನಾವರಣಗೊಳ್ಳುತ್ತಿದ್ದಂತೆಯೇ ವಿವಾದ ಹೊತ್ತಿಕೊಂಡಿದೆ. ರಾಷ್ಟ್ರೀಯ ಲಾಂಛನದ ಸೌಮ್ಯ ರೂಪವನ್ನು ಉಗ್ರ ರೂಪವನ್ನಾಗಿ ಪರಿವರ್ತಿಸಲಾಗಿದೆ ಎಂದು ವಿಪಕ್ಷಗಳು ಟೀಕಿಸಿದ್ದುವು. ಇದೀಗ ನಟ ಪ್ರಕಾಶ್ ರೈ ಸಹ ರಾಷ್ಟ್ರ ಲಾಂಛನದ ಹೊಸ ಶಿಲ್ಪದ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ಆದರೆ ಮತ್ತೋರ್ವ ಖ್ಯಾತ ನಟ ಅನುಪಮ್ ಖೇರ್ ರಾಷ್ಟ್ರ ಲಾಂಛನದ ಹೊಸ ಶಿಲ್ಪವನ್ನು ಬೆಂಬಲಿಸಿದ್ದಾರೆ.

ಈ ಕುರಿತಂತೆ ನಟ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿ ಪ್ರಶ್ನೆ ಮಾಡಿದ್ದು, ‘ನಾವು ಎತ್ತ ಸಾಗುತ್ತಿದ್ದೇವೆ’ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಬದಲಾವಣೆಯಾದ ರಾಮ, ಹನುಮಂತನ ಫೋಟೋಗಳನ್ನು ಹಾಕಿದ್ದಾರೆ. ಇತ್ತ ನಟ ಅನುಪಮ್ ಖೇರ್ ಸಿಂಹಕ್ಕೆ ಹಲ್ಲುಗಳು ಇರುವುದು ಸಹಜ. ಅಲ್ಲದೇ ತನ್ನ ಹಲ್ಲುಗಳನ್ನು ಸಿಂಹ ಪ್ರದರ್ಶಿಸುವುದು ಸಹಜ ಎಂದು ವ್ಯಂಗ್ಯವಾಡಿದ್ದಾರೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದೂ, ಘರ್ಜಿಸಿದ ಸಿಂಹಗಳು ನಮಗಿಂದು ಬೇಕಾಗಿವೆ ಎಂದು ಹೇಳಿದ್ದಾರೆ.