ರೀಲ್ಸ್ ರಾಣಿ ಮೇಲೆ ಪ್ರಾಣ, ಆಕೆ ಮದುವೆ ಬೇಡ ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಯುವಕ.

35

ಬೆಂಗಳೂರು: ಮದುವೆಗೆ ನಿರಾಕರಿಸಿದ ಕಾರಣಕ್ಕೆ ರೀಲ್ಸ್ ರಾಣಿ ವೀಣಾ ಅವರನ್ನು ಪ್ರೀತಿಸುತ್ತಿದ್ದ ಯುವಕ ಮದನ್ ಎನ್ನುವಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಿವಿನ್ ರಿಲೇಷನ್‍ಶಿಪ್‍ನಲ್ಲಿದ್ದ ವೀಣಾ ಹಾಗೂ ಮದನ್ ಅವರು ಸೆಪ್ಟೆಂಬರ್ ಒಂದರಂದು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಸೀರಿಯಲ್ ರೀಲ್ಸ್ ರಾಣಿ ವೀಣಾ ಹಾಗೂ ಮದನ್ ಅವರು ಲಿವಿನ್ ರಿಲೇಷನ್‍ಶಿಪ್‍ನಲ್ಲಿದ್ದರು. ಪಾರ್ಟಿ ನಂತರ ಮದನ್ ವೀಣಾ ಬಳಿ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ವೀಣಾ ಈ ವೇಳೆ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿದ್ದು ಮನನೊಂದು ಮದನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ಮದುವೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಆರೋಪ ಕೇಳಿ ಬಂದಿದೆ. ಮದನ್ (25) ಆತ್ಮಹತ್ಯೆಗೆ ಶರಣಾದ ಯುವಕ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವತಿ ನಟಿ ವೀಣಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.