ರೋಮ್‌ನಲ್ಲಿ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್ ರೊಮ್ಯಾನ್ಸ್…

46
firstsuddi

ಹಾಲಿವುಡ್‌ನ ‘ಸಿಟಾಡೆಲ್’ ರಿಲೀಸ್‌ಗೂ ಮುನ್ನವೇ ವೆಕೇಷನ್‌ಗಾಗಿ ರೋಮ್‌ಗೆ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತುತ ಇವರು ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ.

ರೋಮ್‌ನಲ್ಲಿ ರೊಮ್ಯಾಂಟಿಕ್ ಡೇಟ್ ಮಾಡುತ್ತಾ ನಿಕ್ ,ಪತ್ನಿಗೆ ಸಿಹಿಮುತ್ತನಿಟ್ಟಿದ್ದಾರೆ. ಈ ವಿಡಿಯೋವನ್ನು ನಿಕ್ ಜೋನಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸದ್ದು ಮಾಡ್ತಿದ್ದಂತೆ ಅಭಿಮಾನಿಗಳು, ಜೋಡಿ ಅಂದರೆ ಹೀಗಿರಬೇಕು ಎಂದು ಹಾಡಿ ಹೊಗಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವೆ 10 ವರ್ಷಗಳ ವಯಸ್ಸಿನ ಅಂತರ ಇದೆ. ನಿಕ್ ಅವರು ಪ್ರಿಯಾಂಕಾಗಿಂತ 10 ವರ್ಷ ಚಿಕ್ಕವರು. ಈ ಜೋಡಿಯ ಪ್ರೀತಿಗೆ ವಯಸ್ಸಿನ ಅಂತರದಿಂದ ಯಾವುದೇ ಅಡ್ಡಿ ಆಗಿಲ್ಲ. ಇಬ್ಬರೂ ಕೂಡ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ದೇಶ ಬೇರೇ, ಧರ್ಮ ಬೇರೇಯಾಗಿದ್ರು ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅನೇಕರಿಗೆ ಪ್ರಿಯಾಂಕಾ- ನಿಕ್  ಮಾದರಿ ಜೋಡಿಯಾಗಿ ಬದುಕುತ್ತಿದ್ದಾರೆ.