ಬೆಂಗಳೂರು : ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಿ ಎಂದಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಸಂತೆಬಾಚನಹಳ್ಳಿ ಗ್ರಾಮದ ನಿವಾಸಿ ಮುಕುಂದ್(48)ಎಂದು ಗುರುತಿಸಲಾಗಿದ್ದು, ಮಂಜುಳಾ(42) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆ ಕಳೆದ ಕೆಲ ವರ್ಷಗಳಿಂದ ತನ್ನ ಗಂಡನೊಂದಿಗೆ ಜಗಳವಾಡಿಕೊಂಡು ತನ್ನ ಮಗನೊಂದಿಗೆ ವಾಸವಾಗಿದ್ದರು. ಆದರೆ ಒಂಟಿ ಜೀವನದಿಂದ ಬೇಸತ್ತು ಹೊಟ್ಟೆಪಾಡಿಗಾಗಿ ವೇಶ್ಯವಾಟಿಕೆ ದಂಧೆಯನ್ನು ಶುರು ಮಾಡಿದ್ದರು. ಈ ವೇಳೆ ಮಹಿಳೆಯ ಜೊತೆ ಲೈಂಗಿಕ ಕ್ರಿಯೆಗೆ ಬಂದ ವ್ಯಕ್ತಿಗೆ ಮಹಿಳೆ ಕಾಂಡೋಮ್ ಬಳಸುವಂತೆ ಹೇಳಿದ್ದಾರೆ. ಆದರೆ ಆ ವ್ಯಕ್ತಿ ನಾನು ನಿನಗೆ ಹಣ ನೀಡಿದ್ದೇನೆ. ನೀನು ಹೇಳಿದ ಹಾಗೆ ಕೇಳಲು ಆಗುವುದಿಲ್ಲ ಎಂದು ಮಹಿಳೆ ಬಳಿ ಜಗಳವಾಡಿದ್ದು, ಬಳಿಕ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಬಳಿಕ ಮಹಿಳೆ ಕಿರುಚಲು ಶುರು ಮಾಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಯಾರಾದರೂ ಬರುತ್ತಾರೆ ಎಂಬ ಕಾರಣಕ್ಕೆ ಮುಕುಂದ್ ಮನೆಯಲ್ಲಿದ್ದ ಚಾಕುವಿನಿಂದ ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದು, ಸದ್ಯ ಸುಬ್ರಹ್ಮಣ್ಯನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










