ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂದು ಯುವತಿಯನ್ನು ನಗ್ನಗೊಳಿಸಿ ಥಳಿತ…

299
firstsuddi

ಫಸ್ಟ್ ಸುದ್ದಿ : ತೆಲುಗು ಚಿತ್ರರಂಗದ ಕಿರಿಯ ನೃತ್ಯ ಕಲಾವಿದೆಯನ್ನು ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬೆತ್ತಲೆಗೊಳಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಆಂಧ್ರ ಚಿತ್ರರಂಗದಲ್ಲಿ ನೃತ್ಯ ಕಲಾವಿದೆಯಾದ ಇವಳು ಹಣದ ಅನಿವಾರ್ಯತೆಯಿಂದ ಬಾರ್ ಡ್ಯಾನ್ಸರ್ ಆಗಿ ನಗರದ ಪ್ರಖ್ಯಾತ ಹೋಟೆಲ್ ಲಿಸ್ಬನ್ ರೆಸ್ಟ್ರೋಬಾರ್ ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಹೋಟೆಲ್ ಆಡಳಿತ ಮಂಡಳಿ ಗಿರಾಕಿಗಳಿಗೆ ಲೈಂಗಿಕ ಸುಖ ನೀಡುವಂತೆ ಒತ್ತಡ ಹೇರಿದ್ದು, ಯುವತಿ ನಾನು ದೇಹ ಮಾರಿಕೊಳ್ಳುವುದಿಲ್ಲ ಎಂದು ಹೇಳಿದ್ದಕ್ಕೆ ಆಕೆಯ ಸಹ ಉದ್ಯೋಗಿ ನಾಲ್ಕು ಜನ ಡ್ಯಾನ್ಸರ್‍ಗಳು ಹಾಗೂ ಮಹಮ್ಮದ್ ಸಯ್ಯದ್ ಎಂಬುವವರು ಇವಳನ್ನು ರಸ್ತೆಯಲ್ಲೇ ನಗ್ನಗೊಳಿಸಿ ಥಳಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.