ವಂಚನೆ ಪ್ರಕರಣ ; ನಟಿ ಶಿಲ್ಪಾ ಶೆಟ್ಟಿಗೆ ನೋಟಿಸ್…

84
firstsuddi

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ. ಇದರ ನಡುವೆ ನಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಮೆಲೆ ವಂಚನೆ ಆರೋಪದಡಿ ಲಕ್ನೋನಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಶಿಲ್ಪಾ ಶೆಟ್ಟಿಗೆ ನೋಟೀಸ್ ಜಾರಿ ಮಾಡಲಾಗಿದೆ.

ವೆಲ್ ನೆಸ್ ಸೆಂಟರ್ ನ ಫ್ರಾಂಚೈಸಿ ಡೀಲ್ ನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಐಒಎಸ್ ಐಎಸ್ ವೆಲ್ ನೆಸ್ ಸೆಂಟರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಡೈರೆಕ್ಟರ್ ವಿರುದ್ಧ ಲಕ್ನೋನಲ್ಲಿ ದೂರು ದಾಖಲಾಗಿದೆ. ಕಂಪನಿಗೆ ಶಿಲ್ಪಾ ಶೆಟ್ಟಿ ಅಧ್ಯಕ್ಷೆ ಎಂದು ತಿಳಿದುಬಂದಿದೆ. ಹೀಗಾಗಿ, ಶಿಲ್ಪಾ ಶೆಟ್ಟಿಗೆ ನಾವು ನೋಟೀಸ್ ಕೊಟ್ಟಿದ್ದೇವೆ. ಪ್ರಕರಣ ಸಂಬಂಧ ಅವರ ವಿವರಣೆಯನ್ನು ತಿಳಿಸಲು ಸೂಚಿಸಿದ್ದೇವೆ’ ಎಂದು ಲಕ್ನೋ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಹೇಳಿದ್ದಾರೆ.