ವಿದ್ಯುತ್ ಸ್ಪರ್ಶ ; ಜೂನಿಯರ್ ರವಿಚಂದ್ರನ್ ಖ್ಯಾತಿಯ ಲಕ್ಷ್ಮೀ ನಾರಾಯಣ್ ಸಾವು…

50
firstsuddi

ತುಮಕೂರು : ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಪಡೆದಿದ್ದ ಲಕ್ಷ್ಮೀ ನಾರಾಯಣ್ ಅವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

35 ವರ್ಷದ ಲಕ್ಷ್ಮೀ ನಾರಾಯಣ್ ಜಿಲ್ಲೆಯ ಕುಣಿಗಲ್ ತಾಲೂಕಿನ ಹೆರೂರು ಗ್ರಾಮದ ನಿವಾಸಿ. ಲಕ್ಷ್ಮೀ ನಾರಾಯಣ್ ಅವರು ನಿನ್ನೆ ಸಂಜೆ ತಮ್ಮ ಮನೆಯ ಸಂಪ್ ಗೆ ನೀರು ತುಂಬಿಸಲು ಮೋಟಾರ್ ಆನ್ ಮಾಡಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅನೇಕ ವರ್ಷಗಳಿಂದ ವಿವಿಧ ಆರ್ಕೆಸ್ಟ್ರಾಗಳಲ್ಲಿ ಜೂನಿಯರ್ ರವಿಚಂದ್ರನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀನಾರಾಯಣ್ ಖ್ಯಾತಿಗಳಿಸಿದ್ದರು. ಘಟನೆ ಸಂಬಂಧ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.