ವಿವಾಹವಾದ ಮರುದಿನವೇ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ…

242
firstsuddi

ಲಕ್ನೋ : ಮದುವೆಯಾದ ಮರುದಿನವೇ ನವವಿವಾಹಿತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಜ.17ರಂದು ಸಂತ್ರಸ್ಥೆಯ ವಿವಾಹವಾಗಿದ್ದು, ಜ.18ರಂದು ಬೆಳಿಗ್ಗೆ ಮಹಿಳೆಯನ್ನು ಇಬ್ಬರು ಪುರುಷರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ನಾಪತ್ತೆಯಾಗುತ್ತಿದ್ದಂತೆ ಆಕೆಯ ಪತಿಯ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಹಾಪುರದ ಬ್ಯಾಂಕ್ ಬಳಿ ಪತ್ತೆ ಮಾಡಿದ್ದು, ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಪ್ರತಿಕ್ರಯಿಸಿದ ಡಿಎಸ್‍ಪಿ ರಾಜೇಶ್ ಸಿಂಗ್ ಅವರು, ಜ.17ರಂದು ಸಂತ್ರಸ್ಥೆಯ ವಿವಾಹವಾಗಿದ್ದು, ಜ18 ರಂದು ಬೆಳಿಗ್ಗೆಯಿಂದ ಕಾಣೆಯಾಗಿದ್ದರು. ಈ ಕುರಿತು ಆಕೆಯ ಪತಿಯ ಮನೆಯವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ನಾವು ಭಾನುವಾರ ಬೆಳಿಗ್ಗೆ ಮಹಿಳೆಯನ್ನು ಹಾಪುರದ ಬ್ಯಾಂಕ್ ಬಳಿ ಪತ್ತೆ ಮಾಡಿದ್ದೇವೆ. ಈ ಘಟನೆಯಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದು, ಈ ಕುರಿತು ಯಾವುದೇ ಹೇಳಿಕೆಯನ್ನು ನೀಡುವ ಪರಿಸ್ಥಿಯಲ್ಲಿ ಇಲ್ಲ. ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.