ಚಿಕ್ಕಮಗಳೂರು : ಪತ್ನಿಯಿಂದ ವಿಚ್ಛೇದನ ಪಡೆಯದ ಗ್ರಾಮಲೆಕ್ಕಿಗನೊಂದಿಗೆ ತಹಶೀಲ್ದಾರ್ ರಿಜಿಸ್ಟರ್ ಮ್ಯಾರೇಜ್ ಆದ ಹಿನ್ನಲೆ ತಹಶೀಲ್ದಾರ್ ಗೆ ಡಿಸಿ ನೋಟಿಸ್ ನೀಡಿರುವ ಘಟನೆ ಜಿಲ್ಲೆಯ ಎನ್.ಆರ್.ಪರದಲ್ಲಿ ನಡೆದಿದೆ.
ಎನ್.ಆರ್.ಪುರ ತಹಶೀಲ್ದಾರ್ ಗೀತಾ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಪತ್ನಿಯಿಂದ ವಿಚ್ಛೇದನ ಪಡೆಯದೇ ಇರುವ ವಿವಾಹಿತ ಗ್ರಾಮ ಲೆಕ್ಕಿಗ ಶ್ರೀನಿಧಿ ಎಂಬುವವರನ್ನು ಮದುವೆಯಾಗಿದ್ದಾರೆ.
ಜುಲೈ 19ರಂದು ಎನ್.ಆರ್ ಪುರದಲ್ಲಿ ತಹಶೀಲ್ದಾರ್ ಗೀತಾ ಹಾಗೂ ಗ್ರಾಮ ಲೆಕ್ಕಿಗ ಶ್ರೀನಿಧಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಶ್ರೀನಿಧಿ ಜೊತೆ ಮದುವೆ ಆಗುವ ವೇಳೆ ಅವಿವಾಹಿತೆ ಎಂದು ಗೀತಾ ತೋರಿಸಿರುವುದು ಕೂಡ ಈ ವೇಳೆ ಬೆಳಕಿಗೆ ಬಂದಿದೆ.










