ಬೆಂಗಳೂರು : ಹೆಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ನೀವು ಮೂಲ ಬಿಜೆಪಿಗರು ಅಲ್ಲ. ನಮಗೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ವಿಶ್ವಾಸ ಇದೆ. ಹತಾಶೆಯಿಂದ ಸಿಎಂ ವಿರುದ್ಧ ಮಾತಾಡಬೇಡಿ. ಸಿಎಂ ಅವರನ್ನು ಆಯ್ಕೆ ಮಾಡುವುದು ಪರಿಷತ್ ಸದಸ್ಯರಲ್ಲ. ಪಂಚಮಸಾಲಿಯವರು ಸಿಎಂ ಆಗಬೇಕು ಎಂದು ನಿರ್ಧಾರ ಮಾಡೋದು ಹೈಕಮಾಂಡ್. ನೀವು ಇಂತಹ ಹೇಳಿಕೆ ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ದೂರಿದ್ದೀರಿ. ವಿಶ್ವನಾಥ್ ಅವರೇ ಹಾಗಾದರೆ ನಿಮ್ಮ ವಯಸ್ಸು ಎಷ್ಟು? ನಿಜ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದರೂ ಅವರ ಮನಸ್ಸು ಯುವಕನಂತೆ ಕೆಲಸ ಮಾಡುತ್ತಿದೆ ಎಂದು ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.










