ವಿಶ್ವಾಸ ಮತಯಾಚನೆ ಬಗ್ಗೆ ನಮಗೆ ಯಾವುದೇ ಭಯವಿಲ್ಲ : ಜಿ.ಟಿ. ದೇವೇಗೌಡ…

285
firstsuddi

ಮೈಸೂರು : ಸರ್ಕಾರಕ್ಕೆ ಏನೂ ಆಗುವುದಿಲ್ಲ, ಸುಭದ್ರವಾಗಿರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಹೇಳಿದ್ದು, ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ 5 ವರ್ಷ ಇರುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಸದ್ಯಕ್ಕೆ ಸರ್ಕಾರ ಸುಭದ್ರವಾಗಿರುತ್ತದೆ. ವಿಶ್ವಾಸ ಮತಯಾಚನೆ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಮುಂಬೈಯಲ್ಲಿ ಯಾವುದೇ ಆಪರೇಷನ್ ನಡೆಯುವುದಿಲ್ಲ. ಎಲ್ಲವೂ ಇಲ್ಲೇ ನಡೆಯುತ್ತದೆ. ಬಿಜೆಪಿ ಪಕ್ಷದವರಿಗೆ ಆಪರೇಷನ್ ಬಗ್ಗೆ ಭಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗಂತೂ ಯಾವುದೇ ಭಯವಿಲ್ಲ. ನಾವು ಆರಾಮಾಗಿಯೇ ಇದ್ದೇವೆ ಎಂದು ಹೇಳಿದರು.