ವೃದ್ದರೊಬ್ಬರ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಯುವಕರು…!

1664
firstsuddi

ಮೈಸೂರು : ಕುಲ್ಲಕ ಕಾರಣಕ್ಕೆ ವೃದ್ದರೊಬ್ಬರ ತಲೆಯನ್ನು ಕಡಿದು ಬಳಿಕ ಯುವಕರು ರುಂಡವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಘಟನೆ ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಂಪೇಗೌಡ(65) ಹತ್ಯೆಯಾದ ವೃದ್ದ ಎಂದು ಗುರುತಿಸಲಾಗಿದ್ದು, ಚೇತನ್ ಹಾಗೂ ಮಧು ಎಂಬುವವರು ಕುಲ್ಲಕ ಕಾರಣಕ್ಕೆ ಕೆಂಪೇಗೌಡರು ಮಲಗಿದ್ದ ವೇಳೆ ಅವರ ತಲೆಯನ್ನು ಕತ್ತರಿಸಿದ್ದಾರೆ. ವೃದ್ದರ ರುಂಡವನ್ನು ಕತ್ತರಿಸಿದ ಯುವಕರು ರುಂಡ ಹಿಡಿದುಕೊಂಡೇ ಪೊಲೀಸ್ ಠಾಣೆಗೆ ಬಂದಿದ್ದಾರೆ. ರುಂಡದೊಂದಿಗೆ ಠಾಣೆಗೆ ಬಂದ ಯುವಕರನ್ನು ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.