ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್…

145
firstsuddi

ನವದೆಹಲಿ : ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ತಮ್ಮ ಗೆಳತಿ ಧನಶ್ರೀ ವರ್ಮಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನಶ್ರೀ ವರ್ಮಾ ಅವರು ಕೋರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಬ್ಬರ ವಿವಾಹ ಸಮಾರಂಭ ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿದೆ. ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರು ಆಪ್ತರು ಭಾಗಿಯಾಗಿದ್ದರು. ಮದುವೆ ಕುರಿತು ಚಹಾಲ್ ಅವರು ತಮ್ಮ ಟ್ವಿಟರ್ ಮೂಲಕ ಟ್ವೀಟ್ ಮಾಡಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.