ಶಾಲಾ-ಕಾಲೇಜುಗಳಲ್ಲಿ ಯಾವುದೇ ಜಾತಿ, ಮತ, ಭಾಷೆ ಇಲ್ಲ : ವೆಂಕಯ್ಯ ನಾಯ್ಡು.

63
firstsuddi

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಶಾಲಾ- ಕಾಲೇಜುಗಳಲ್ಲಿ ಯಾವುದೇ ಜಾತಿ, ಮತ, ಭಾಷೆ ಇಲ್ಲ. ನಾವೆಲ್ಲರೂ ಭಾರತೀಯರು. ಭಾರತೀಯತೆ ನಮ್ಮದಾಗಬೇಕು ಎಂದು ನಗರದ ಸರ್ಜಾಪುರದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

ಶಾಲಾ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು. ಪರಿಸರ ಕಾಳಜಿ, ಹವಾಮಾನ ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಬೇಕು. ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಧರ್ಮದ ಬಗ್ಗೆ ತಿಳಿಸಬೇಕು. ಎಲ್ಲಾ ಭಾಷೆಯನ್ನು ಕಲಿಯಬೇಕು, ಮಾತೃ ಭಾಷೆ ಮರೆಯಬಾರದು ಎಂದರು.

ಶಾಲಾ- ಕಾಲೇಜುಗಳಲ್ಲಿ ಯಾವುದೇ ವಿವಾದ ಬೇಡ. ಶಾಲೆಗಳು ಮಾಡಿರುವ ಕ್ರಮವನ್ನು ವಿದ್ಯಾರ್ಥಿ ಅಳವಡಿಸಕೊಳ್ಳಬೇಕು. ಇರುವೆಗಳಿಗೆ ಸಕ್ಕರೆ ಹಾಕಿ, ಹಾವಿಗೆ ಹಾಲೆರದು, ಪಶುಗಳಿಗೆ ಮೇವು ಹಾಕಿ, ತಿಲಕವಿಟ್ಟು ಗೌರವಿಸುವ ಸಂಸ್ಕಾರ ನಮ್ಮದು. ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೆ ಮೊದಲು ನಿಮ್ಮ ಮಾತೃ ಭಾಷೆ ಕಲೀರಿ. ಮಾತೃ ಭಾಷೆ ಕಣ್ಣು ಇದ್ದಂತೆ. ಇತರೆ ಭಾಷೆ ಕನ್ನಡಕ ಇದ್ದಂತೆ. ಕಣ್ಣೆ ಇಲ್ಲದಿದ್ದರೆ ರಿಬಾನ್ ಗ್ಲಾಸ್ ಹಾಕಿದ್ರೂ ಪ್ರಯೋಜನ ಇರಲ್ಲ ಎಂದರು.