ಶಾಲೆಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವಂತಿಲ್ಲ : ಸಚಿವ ಆರಗ ಜ್ಞಾನೇಂದ್ರ.

83
firstsuddi

ಬೆಂಗಳೂರು : ಶಾಲೆಗಳಿಗೆ ಹಿಜಾಬ್ ಹಾಗೂ ಕೇಸರಿ ಶಾಲು ಅನ್ನು ಧರಿಸಿಕೊಂಡು ಬರಬಾರದು. ಧರ್ಮ ಆಚರಣೆ ಮಾಡಲು ಶಾಲಾ-ಕಾಲೇಜುಗಳು ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಉಡುಪಿಯ ಹಿಜಾಬ್ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಾಲೆಗೆ ಸಮವಸ್ತ್ರ ಕಡ್ಡಾಯ ಅಂತಾ ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ವಿದ್ಯಾರ್ಥಿಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಬೇಕು. ಧರ್ಮದ ಪೂಜೆ ಮಾಡಲು ದೇವಾಲಯ, ಮಸೀದಿ, ಚರ್ಚ್ ಇವೆ. ಅಲ್ಲಿ ಬೇಕಾದಾರೆ ಇದನ್ನು ಮಾಡಲಿ. ಆದರೆ ಶಾಲಾ, ಕಾಲೇಜಿನ ವಾತಾವರಣದಲ್ಲಿ ಇಂತಹ ಸಂಘರ್ಷಗಳು ಆಗಬಾರದು ಎಂದು ತಿಳಿಸಿದರು.

ಯಾವುದೇ ಧರ್ಮದವರು ಅವರವರ ಧರ್ಮ ಆಚರಣೆ ಮಾಡಲು ಶಾಲೆಗೆ ಬರುವುದಲ್ಲ. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು. ಶಾಲೆ ಕಾಂಪೌಂಡ್ ಒಳಗೆ ಹಿಜಾಬ್, ಕೇಸರಿ ಶಾಲು ಧರಿಸಬಾರದು. ಶಾಲಾ ಮ್ಯಾನೇಜ್ಮೆಂಟ್ ಹೇಳುವ ರೀತಿ ನಡೆದುಕೊಳ್ಳಬೇಕು. ಹಿಜಾಬ್ ಹಿಂದೆ ಇರುವ ಮತೀಯ ಸಂಘಟನೆಗಳ ಬಗ್ಗೆ ಗಮನ ಕೊಡಲು ಪೊಲೀಸರಿಗೆ ಹೇಳಿದ್ದೇನೆ ಎಂದರು.