ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಕೊಂದು ಪತಿ ನೇಣಿಗೆ ಶರಣು…

72
firstsuddi

ವಿಜಯಪುರ : ಪತ್ನಿಯ ಶೀಲ ಶಂಕಿಸಿ ಆಕೆಯ ಕತ್ತು ಹಿಸುಕಿ ಕೊಂದು ಬಳಿಕ ಪತಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್.ಎಸ್ ಗ್ರಾಮದಲ್ಲಿ ನಡೆದಿದೆ.

ಹನುಮವ್ವ (38) ಪತಿಯಿಂದ ಕೊಲೆಗೀಡಾದ ಪತ್ನಿ. ಶಿವಪ್ಪ ಮನಗೂಳಿ (45) ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಬೇನಾಳ ಆರ್.ಎಸ್. ಗ್ರಾಮದ ಹೊರಭಾಗದ ಜಮೀನಿನ ಶೆಡ್ ಗೆ ನಿನ್ನೆ ಪತ್ನಿ ಹನುಮವ್ವಳನ್ನು ಕರೆದುಕೊಂಡು ಹೋದ ಶಿವಪ್ಪ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಅಲ್ಲಿಯೇ ಇದ್ದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಡಿತದ ದಾಸನಾಗಿದ್ದ ಶಿವಪ್ಪ ಪತ್ನಿ ಶೀಲದ ಮೇಲೆ ಯಾವಾಗಲೂ ಸಂಶಯಗೊಳ್ಳುತ್ತಿದ್ದನು. ಈ ಬಗ್ಗೆ ಆತನ ಪುತ್ರರು ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ ತಿಳಿದುಕೊಂಡಿರಲಿಲ್ಲ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.