ಶೂಟಿಂಗ್ ವೇಳೆ ತೀವ್ರವಾಗಿ ಗಾಯಗೊಂಡ ರೋಹಿತ್ ಶೆಟ್ಟಿ – ಆಸ್ಪತ್ರೆಗೆ ದಾಖಲು…

82
firstsuddi

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ರೋಹಿತ್ ಶೆಟ್ಟಿ ಸದ್ಯ `ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ `ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿದೆ. ಈ ಸರಣಿಯ ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಆಗ ರೋಹಿತ್ ಶೆಟ್ಟಿ ಅವರಿಗೆ ತೀವ್ರ ಏಟಾಗಿದೆ ಎನ್ನಲಾಗಿದೆ.

ತಕ್ಷಣ ರೋಹಿತ್ ಶೆಟ್ಟಿ ಅವರನ್ನು ಸಮೀಪದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.