ಶೋಪಿಯಾನ್ ಎನ್ ಕೌಂಟರ್ : ಮೂವರು ಉಗ್ರರ ಹತ್ಯೆ, ಓರ್ವ ಶರಣು…

108
firstsuddi

ಶ್ರೀನಗರ : ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಾಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಅಲ್-ಬದರ್ ಉಗ್ರಗಾಮಿ ಸಂಘಟನೆಗೆ ಹೊಸದಾಗಿ ನೇಮಕಗೊಂಡಿರುವ ನಾಲ್ವರು ಉಗ್ರರು ಶೋಪಿಯಾನ್ ನ ಕನಿಗಂ ಪ್ರದೇಶದಲ್ಲಿರುವುದನ್ನು ಗುರುತಿಸಿದ ಭದ್ರತಾ ಪಡೆ ಅವರನ್ನು ಬಂಧಿಸಿ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಉಗ್ರರು ಅದಕ್ಕೆ ನಿರಾಕರಿಸಿದರು. ಈ ವೇಳೆ ನಡೆದ ಎನ್ ಕೌಂಟರ್ ನಲ್ಲಿ ಮೂವರನ್ನು ಹತ್ಯೆಗೈಯ್ಯಲಾಗಿದ್ದು, ತೌಸಿಫ್ ಅಹ್ಮದ್ ಎಂಬ ಓರ್ವ ಉಗ್ರ ಶರಣಾಗಿದ್ದಾನೆ.