ಮೂಡಿಗೆರೆ :ಮೊಬೈಲ್ ವ್ಯಾಪಾರ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಸಂಗೀತ ಮೊಬೈಲ್ಸ್ ಕಂಪನಿಯು ಮೂಡಿಗೆರೆ ಶಾಖೆ ವತಿಯಿಂದ ಬ್ರಾಂಡ್ ಪ್ರಚಾರಕ್ಕಾಗಿ ಬೀದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ಪಟ್ಟಣದಲ್ಲಿ ವಿತರಿಸಲಾಯಿತು . ಒಬ್ಬ ಮನುಷ್ಯ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಹೊರಟರೆ ಹಲವು ರೀತಿಯಲ್ಲೂ ಸಹಾಯ ಮಾಡಬಹುದು ಎಂದು ಮೂಡಿಗೆರೆ ಸಂಗೀತಾ ಮೊಬೈಲ್ ಸ್ಟೋರ್ ವ್ಯವಸ್ಥಾಪಕ ಸಂಜಯ್ ಕೊಟ್ಟಿಗೆಹಾರ ಅವರು ವೀಳ್ಯದೆಲೆ ಮಾರುತ್ತಿದ್ದ ಎಂಬತ್ತೈದು ವರ್ಷದ ವೃದ್ಧೆಗೆ ದೊಡ್ಡದಾದ ಕೊಡೆ ಕೊಡುವ ಮೂಲಕ ತೋರಿಸಿಕೊಟ್ಟಿದ್ದು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದ್ದು ಅಂಗಡಿ ಮುಂಭಾಗದಲ್ಲಿ ಸುಮ್ಮನೆ ಪ್ರಚಾರಕ್ಕೆ ಇಡುವುದಕ್ಕಿಂತ ಬಡ ಜನರ ಅನುಕೂಲಕ್ಕೆ ಸಹಾಯ ಮಾಡಿದ ಸ್ಟೋರ್ ಮ್ಯಾನೇಜರ್ ಸಂಜಯ್ ಕೊಟ್ಟಿಗೆಹಾರ ಅವರಿಗೆ ಫಸ್ಟ್ ಸುದ್ದಿ ಬಳಗ ಅಭಿನಂದಿಸುತ್ತದೆ.
 
            
 
		








