ಮೂಡಿಗೆರೆ: ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ
ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಬೈಕು ಸೇರಿದಂತೆ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಪಿಗಳಾದ ಯೂಸುಫ್ ಹಾಗೂ ಹಂಡುಗೂಳಿ ಮೂಲದ ಮನ್ಸೂರ್ ಎಂಬಾತನನ್ನು ಬಂಧಿಸಲಾಗಿದ್ದು. 

ಮನ್ಸೂರ್ ಮೇಲೆ ಹಲವು ಪ್ರಕರಣಗಳಿದ್ದು ಈ ಹಿಂದೆ ಬಾಳೆಹೊನ್ನೂರು ಅರಣ್ಯ ಪ್ರದೇಶದಲ್ಲಿ ಮರ ಕಳ್ಳತನ ಮಾಡಿದ ಆರೋಪವಿದ್ದು. ಹಾಸನ ಮೂಲದ ಪ್ರತಿನಿಧಿ ಪತ್ರಿಕೆಯ ವರದಿಗಾರ ಎಂದು ಸುಳ್ಳು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸುತ್ತಿದ್ದ ಎನ್ನಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.










