ಕೊಟ್ಟಿಗೆಹಾರ : ಸಂಘ ಸಂಸ್ಥೆಗಳಲ್ಲಿ ತೊಡಗಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಸಂಘಸಂಸ್ಥೆಗಳು ಸಹಕಾರಿಯಾಗಿವೆ ಎಂದು ಜೆಸಿಐ ಪೂರ್ವ ರಾಷ್ಟ್ರಿಯ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.
ಬಣಕಲ್‍ನ ಗ್ರಾ.ಪಂ ಸಭಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಜೆಸಿಐ ಬಣಕಲ್ ವಿಸ್ಮಯದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮ ವೃತ್ತಿಪರತೆಯೊಂದಿಗೆ ಸೇವಾಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದರು.
ಜೆಸಿಐ ವಲಯ ಅಧ್ಯಕ್ಷೆ ಯಶಸ್ವಿನಿ ಮಾತನಾಡಿ, ಬಣಕಲ್ ಜೆಸಿಐ ವಿಸ್ಮಯವೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಜೆಸಿಐ ಯುವಪೀಳಿಗೆ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿದೆ. ಉತ್ತಮ ವಾಗ್ಮಿಯಾಗಲು ಜೆಸಿಐ ಉತ್ತಮ ವೇದಿಕೆಯಾಗಿದೆ ಎಂದರು. ಮತ್ತು ಕಳೆದ ವರ್ಷಗಳಲ್ಲಿ ಶ್ರಮಿಸಿದ ಸರ್ವರನ್ನು ಅಭಿನಂದಿಸಿದರು.
ಬಣಕಲ್ ಜೆಸಿಐನ ಸ್ಥಾಪಕ ಅಧ್ಯಕ್ಷ ಬಿ ಸುರೇಶ್ ಶೆಟ್ಟಿ ಮಾತನಾಡಿ, ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ. ಬರೆದಿಡುವಂತೆ ಜೀವನ ಮಾಡಬಹುದು. ವಿವೇಕಾನಂದರ ಬದುಕು ಯುವಕರಿಗೆ ಆದರ್ಶವಾಗಿದ್ದು ಅವರ ಚಿಂತನೆಗಳು ಇಂದಿಗೂ ಕೂಡ ಪ್ರಸ್ತುತವಾಗಿದೆ ಎಂದರು.

ಮಿಸ್ ಮಂಗಳೂರು ಆಗಿ ಆಯ್ಕೆಯಾದ ಬಣಕಲ್‍ನ ಬಿ.ಸುರೇಶ್ ಶೆಟ್ಟಿ ಹಾಗೂ ಸೌಮ್ಯ ಶೆಟ್ಟಿ ದಂಪತಿಗಳ ಪುತ್ರಿ ಸುಷ್ಮಾ ಎಸ್ ಶೆಟ್ಟಿ ಹಾಗೂ ಸೂಪರ್ ಮಾಮ್ಸ್ ಕಾರ್ಯಕ್ರಮದ ನೃತ್ಯಗಾರ್ತಿ ಮೂಡಿಗೆರೆಯ ಸೌಮ್ಯಶ್ರಿ ಮಂಜುನಾಥ್ ಅವರನ್ನು ಜೆಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜೆಸಿಐ ಬಣಕಲ್ ವಿಸ್ಮಯದ ನೂತನ ಪದಾಧಿಕಾರಿಗಳಾಗಿ ಎಚ್.ಎಂ ಕೃಷ್ಣೆಗೌಡ (ಅಧ್ಯಕ್ಷರು), ಶರತ್ ಫಲ್ಗುಣಿ (ನಿಕಟಪೂರ್ವ ಅಧ್ಯಕ್ಷರು), ಸುರೇಂದ್ರ ಕೋಳೂರು, ಗಣೇಶ್ ಸಾರಗೋಡು, ಮದನ್ ಗುತ್ತಿ, ಸಂಜಯ್ ಕೊಟ್ಟಿಗೆಹಾರ, ಅರ್ಪಿತಾ ರವಿಶಂಕರ್,( ಉಪಾಧ್ಯಕ್ಷರುಗಳು) ಗಗನ್ ಕೋಳೂರು (ಕಾರ್ಯದರ್ಶಿ), ಸಾಧನ್ ಹೊಕ್ಕಳ್ಳಿ (ಸಹ ಕಾರ್ಯದರ್ಶಿ), ಸರ್ವೇಶ್ ಹಳಿಕೆ (ಖಜಾಂಚಿ), ರಘು ತಳವಾರ, ಅರವಿಂದ್ ಕೋಳೂರು, ಶ್ರೀನಾಥ್, ಬಿ.ಪಿ ಸುಂದರೇಶ್, ಎಚ್.ಟಿ.ಪ್ರಸನ್ನ, ಸೌಮ್ಯ ಎಸ್ ಶೆಟ್ಟಿ, ಲವಕುಮಾರ್ (ನಿರ್ದೇಶಕರು), ನಾಟ್ಯ ರಂಜಿತ್ (ಜೇಸಿರೆಟ್ ಅಧ್ಯಕ್ಷೆ), ನಿಸರ್ಗ ರಘು (ಜೇಸಿರೆಟ್ ಕಾರ್ಯದರ್ಶಿ), ದರ್ಶ್, ಗೌರವ್ (ಜೂನಿಯರ್ ಜೇಸಿ) ಆಯ್ಕೆಯಾದರು.
ಈ ಸಂದರ್ಭದಲ್ಲಿ ಜೆಸಿಐ ಪದಾಧಿಕಾರಿಗಳಾದ ಚರಣ್‍ರಾಜ್, ಅಶ್ವಿನಿ ಶರತ್, ಪ್ರಮೋದ್, ಶ್ರಾವ್ಯ, ಟಿ.ಎಂ ಗಜೇಂದ್ರ, ಹರ್ಷವರ್ದನ್, ರವಿಶಂಕರ್, ರವಿ ಪಟೇಲ್, ಸೋಮೇಶ್‍ಗೌಡ, ಕವೀಶ್, ಲಕ್ಷ್ಮಣಗೌಡ, ಎನ್.ಟಿ.ದಿನೇಶ್, ಹರ್ಷವರ್ದನ್, ರವಿ ವಾಟೆಕಾನ್, ಡಿ.ಟಿ ನವೀನ್, ಮುಂತಾದವರು ಇದ್ದರು.










