ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಇದೆಯಾ…?-ಡಿಕೆಶಿ ಅವರಿಗೆ ಶೋಭಾ ಕರಂದ್ಲಾಜೆ ಅವರ ಪ್ರಶ್ನೆ…

136
firstsuddi

ಉಡುಪಿ : ರಾಹುಲ್ ಗಾಂಧಿ ಚುನಾವಣೆ ಬಂದರೆ ಮಾನಸ ಸರೋವರ, ಕೇದಾರ ಕೈಲಾಸಕ್ಕೆ ಹೋಗುತ್ತಾರೆ, ಉಳಿದ ದಿನಗಳಲ್ಲಿ ಚರ್ಚ್ ಗೆ ಹೋಗುತ್ತಾರೆ ಅದೇ ಡಿ.ಕೆ. ಶಿವಕುಮಾರ್ ಅವರು ಚುನಾವಣೆ ಬಂದಾಗ ದೇವಸ್ಥಾನ ತಿರುಗುತ್ತಾರೆ ಇದು ಕಾಂಗ್ರೆಸ್ಸಿಗರ ನೀತಿ ಆದರೆ ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಾ ಇಲ್ಲ. ನಾವು ದೇವರ ಪರ ನಿಂತವರು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮ ಬಿಜೆಪಿಗರ ಸ್ವತ್ತಾ..? ಎಂಬ ಡಿ.ಕೆ. ಶಿವಕುಮಾರ್ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಹೌದು, ಖಂಡಿತವಾಗಿಯೂ ಕರಾವಳಿಯನ್ನು ನಾವು ದತ್ತು ತೆಗೆದುಕೊಂಡಿದ್ದೇವೆ. ಕರ್ನಾಟಕ ಕರಾವಳಿ ನಮ್ಮದೇ ಆಗಿದ್ದು, ಉಡುಪಿಯ ಐವರು ಶಾಸಕರು ಬಿಜೆಪಿಯವರೇ ಆಗಿದ್ದು, ಈ ಭಾಗವನ್ನು ದತ್ತು ತೆಗೆದುಕೊಳ್ಳುತ್ತೇವೆ. ಅಭಿವೃದ್ಧಿಯೂ ಮಾಡುತ್ತೇವೆ ಎಂದ ಅವರು, ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಯಾವ ಆಟವೂ ಕರಾವಳಿಯಲ್ಲಿ ನಡೆಯುವುದಿಲ್ಲ ಎಂದು ಹೇಳೀದರು.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ ಅವರು, ನಿಮಗೆ ಗೊತ್ತಿರುವ ಮಾಹಿತಿ ಮೊದಲು ಬಹಿರಂಗಪಡಿಸಿ ಅದನ್ನು ಬಿಟ್ಟು ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವುದನ್ನು ಬಿಡಿ. ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ. ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ..? ನಮ್ಮ ನಾಯಕರ ವಿರುದ್ಧ ಏನು ಷಡ್ಯಂತ್ರ ಮಾಡಿದ್ದೀರಿ ಮೊದಲು ಸ್ಪಷ್ಟಪಡಿಸಿ ಯಾವ ಹಾವನ್ನು ಬಿಡುತ್ತೀರೋ ಕಾದು ನೋಡೋಣ ಎಂದರು.
ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಎಂಬ ಸಿದ್ದರಾಮಯ್ಯ ಅವರ ಹೇಳಿಗೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ಎಂಬುವುದನ್ನು ನೋಡಿದ್ದೇನೆ. ಅವರು ಕೋಮುಗಳನ್ನು ಒಡೆದು ಆಳುವ ನೀತಿ ಮಾಡಿದ್ದಲ್ಲದೆ ಜಾತಿ ಜಾತಿಯನ್ನು ಒಡೆಯುವ ನೀತಿ ಮಾಡಿದರು. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ದರು. ನರೇಂದ್ರ ಮೋದಿ ಅವರು ಕೊಟ್ಟ ಅಕ್ಕಿ, ಗೋಧಿ ಬಳಕೆ ಮಾಡಿಕೊಂಡು ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದರು. ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು. ಸುಳ್ಳು ಹೇಳುವುದು ಕಾಂಗ್ರೆಸ್ಸಿನ ಚಾಳಿ ಎಂದ ಶೋಭಾ ಕರಂದ್ಲಾಜೆ ಅವರು, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಥವಾ ಬೇರಲ್ಲೂ ಭವಿಷ್ಯವಿಲ್ಲ ಅಲ್ಲದೇ ಸಿದ್ದರಾಮಯ್ಯ ಅವರ ಮಾತಿಗೂ ಯಾರೂ ಬೆಲೆ ಕೊಡುವುದಿಲ್ಲ ಎಂದು.