ಸಂಭಾವನೆಗಾಗಿ ಬೇಡಬಾರದು : ಸಮಂತಾ

56
firstsuddi

ಟಾಲಿವುಡ್​ನ ಬೇಡಿಕೆಯ ನಟಿ ಸಮಂತಾ. ಅವರು ಸಂಭಾವನೆ ವಿಚಾರವಾಗಿ ಮಾತನಾಡಿದ್ದಾರೆ.

ಹೆಚ್ಚಿನ ಸಂಭಾವನೆ ಪಡೆಯಲು ನಾನು ಹೋರಾಡುತ್ತಿದ್ದೇನೆ. ಹಾಗಂತ, ಹೀರೋಗಳಷ್ಟೇ ಸಂಭಾವನೆ ಪಡೆಯುತ್ತೇನೆ ಎಂದಲ್ಲ. ನಿರ್ಮಾಪಕರೇ ಬಂದು ಹೌದು, ನಾವು ನಿಮಗೆ ಇಷ್ಟು ಪಾವತಿಸಲು ಬಯಸುತ್ತೇವೆ ಎಂದು ಹೇಳಬೇಕು. ಅದಕ್ಕಾಗಿ ನಾನು ಬೇಡಬೇಕಾಗಿಲ್ಲ. ಆದರೆ, ಇದಕ್ಕೆ ಪರಿಶ್ರಮ ಬೇಕು ಎಂದಿದ್ದಾರೆ ಸಮಂತಾ.

ಸಮಂತಾ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಹೀರೋಯಿನ್​ಗಳು ಕೋಟಿ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ಇದು ಅವರ ಪರಿಶ್ರಮಕ್ಕೆ ಸಿಕ್ಕ ಫಲ ಎಂಬುದು ಅನೇಕರ ಅಭಿಪ್ರಾಯ.