ಹಾಸನ : ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರ ಮನೆ ಮೇಲೆ ಮತ್ತೆ ಐಟಿ ದಾಳಿ ನಡೆದಿದ್ದು, ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಜೆಡಿಎಸ್ ನಾಯಕರಿಗೆ ಐಟಿ ಶಾಕ್ ನೀಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಹುಟ್ಟೂರು ಹರದನಹಳ್ಳಿಯಲ್ಲಿ ದೇವೇಗೌಡರ ತಮ್ಮನ ಮಗ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಾಪಣ್ಣಿ ಎಂಬುವವರ ಮನೆ ಸೇರಿದಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಗುತ್ತಿಗೆದಾರರಾದ ಕಾರ್ಲೆ ಇಂದ್ರೇಶ್ ಮತ್ತು ಅನಂತ್ ಎಂಬುವರ ಮನೆ ಮೇಲೆ ಏಕಕಾಲಕ್ಕೆ ಐಟಿ ದಾಳಿ ಮಾಡಿದ್ದಾರೆ.










